IPL 2025: ಪಂತ್ ಔಟಾಗುತ್ತಿದ್ದಂತೆ ಕೋಪದಲ್ಲೇ ಬಾಲ್ಕನಿಯಿಂದ ತೆರಳಿದ ಸಂಜೀವ್ ಗೋಯೆಂಕಾ; ವಿಡಿಯೋ
Rishabh Pant's Poor Performance: ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್ ಹೈದರಾಬಾದ್ ವಿರುದ್ಧ ಕೇವಲ 7 ರನ್ ಗಳಿಸಿ ಔಟಾದರು. ಇದರಿಂದ ಬೇಸರಗೊಂಡ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಬಾಲ್ಕನಿಯಿಂದ ಹೊರಟು ಹೋದ ದೃಶ್ಯ ವೈರಲ್ ಆಗಿದೆ. ಪಂತ್ ಅವರ ಕಳಪೆ ಬ್ಯಾಟಿಂಗ್ ಮತ್ತು ನಾಯಕತ್ವದಿಂದ ಲಕ್ನೋ ತಂಡ ಪ್ಲೇಆಫ್‌ನಿಂದ ಹೊರಬೀಳುವ ಅಪಾಯದಲ್ಲಿದೆ.
ದಾಖಲೆಯ ಮೊತ್ತ ಪಡೆದು ಲಕ್ನೋ ಸೂಪರ್‌ಜೈಂಟ್ಸ್ ತಂಡ ಸೇರಿದ್ದ ನಾಯಕ ರಿಷಭ್ ಪಂತ್ ನಿರ್ಣಾಯಕ ಪಂದ್ಯದಲ್ಲೂ ನಿರಾಶೆ ಮೂಡಿಸಿದರು. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ, ರಿಷಭ್ ಪಂತ್ ಕೇವಲ 7 ರನ್ ಗಳಿಸಿ ಔಟಾದರು. ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದಿದ್ದ ಪಂತ್ ಎಹ್ಸಾನ್ ಮಾಲಿಂಗ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದರು. ಪಂತ್ ವಿಕೆಟ್ ಪತನದ ನಂತರ ಲಕ್ನೋ ಮೈದಾನದಲ್ಲಿ ಕಂಡುಬಂದ ದೃಶ್ಯ ಸ್ವಲ್ಪ ಆಶ್ಚರ್ಯಕರವಾಗಿತ್ತು. ವಾಸ್ತವವಾಗಿ, ಲಕ್ನೋ ಸೂಪರ್‌ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ, ಪಂತ್ ಔಟಾದ ನಂತರ ಲಕ್ನೋ ಕ್ರೀಡಾಂಗಣದ ಬಾಲ್ಕನಿಯಿಂದ ಬೇಸರದಿಂದ ತೆರಳಿದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ
ಪಂತ್ ಮೇಲೆ ಕೋಪಗೊಂಡ್ರ ಸಂಜೀವ್?
ಲಕ್ನೋ ನಾಯಕ ಪಂತ್ ಔಟಾದ ತಕ್ಷಣ, ಬಾಲ್ಕನಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ಸಂಜೀವ್ ಗೋಯೆನಕ್ ಅಲ್ಲಿಂದ ಹೊರಟುಹೋದರು. ಸಂಜೀವ್ ಗೋಯೆಂಕಾ ಕೋಪದಿಂದ ಹೊರಟುಹೋಗಿದ್ದಾರೆಂದು ಹೇಳಲಾಗುತ್ತಿದೆ, ಆದರೆ ನಾವು ಇದನ್ನು ದೃಢೀಕರಿಸಲು ಸಾಧ್ಯವಿಲ್ಲ. ಆದರೆ ಲಕ್ನೋ ತಂಡದ ಮಾಲೀಕ ಕೋಪದಿಂದ ಹೊರಟುಹೋಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹೇಳಲಾಗುತ್ತಿದೆ.
ಸಂಜೀವ್ ಕೋಪಕ್ಕೂ ಅರ್ಥವಿದೆ
ರಿಷಭ್ ಪಂತ್ ವಿರುದ್ಧ ಸಂಜೀವ್ ಕೋಪ ಮಾಡಿಕೊಳ್ಳುವುದಕ್ಕೂ ಕಾರಣವಿದೆ. ಕೇವಲ ಒಂದು ಪಂದ್ಯದಲ್ಲಿ ಅರ್ಧಶತಕ ಬಾರಿಸಿದ್ದನ್ನು ಹೊರತುಪಡಿಸಿ, ಪಂತ್ 9 ಇನ್ನಿಂಗ್ಸ್‌ಗಳಲ್ಲಿ ವಿಫಲರಾಗಿದ್ದಾರೆ. ಈ ಸೀಸನ್ನಲ್ಲಿ ಪಂತ್ 11 ಇನ್ನಿಂಗ್ಸ್‌ಗಳಲ್ಲಿ 135 ರನ್ ಗಳಿಸಿದ್ದಾರೆ. ಅವರ ಬ್ಯಾಟಿಂಗ್ ಸರಾಸರಿ ಕೇವಲ 12.27 ಮತ್ತು ಸ್ಟ್ರೈಕ್ ರೇಟ್ ಕೂಡ ಕೇವಲ 100. ಪಂತ್ ಅವರ ಬ್ಯಾಟಿಂಗ್ ಅನ್ನು ಬದಿಗಿಟ್ಟರೆ, ಅವರ ನಾಯಕತ್ವವೂ ತುಂಬಾ ಕಳಪೆಯಾಗಿದೆ. ಪರಿಣಾಮವಾಗಿ ಲಕ್ನೋ ತಂಡ ಪ್ಲೇಆಫ್ ರೇಸ್ನಿಂದ ಬಹುತೇಕ ಹೊರಬಿದ್ದಿದೆ.