ಏಕೆ ಎಫ್‌ಐಆರ್ ಹಾಕಿಲ್ಲ?; ನ್ಯಾಯಮೂರ್ತಿ ಯಶವಂತ್ ವರ್ಮಾ ವಿವಾದದ ಬಗ್ಗೆ ಉಪರಾಷ್ಟ್ರಪತಿ ಜಗದೀಪ್ ಧಂಖರ್ ಕಟು ಟೀಕೆ
ನವದೆಹಲಿಯಲ್ಲಿ ಇಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಜಗದೀಪ್ ಧಂಖರ್, ಆಗಿನ ದೆಹಲಿ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ದೊಡ್ಡ ಪ್ರಮಾಣದ ಸುಟ್ಟ ನಗದು ಪತ್ತೆಯಾದ ಬಗ್ಗೆ ಎಫ್‌ಐಆರ್ ದಾಖಲಾಗದೆ ಇರುವುದನ್ನು ಪ್ರಶ್ನಿಸಿದ್ದಾರೆ. "ನಮ್ಮ ದೇಶದಲ್ಲಿ ಕಾನೂನಿನ ನಿಯಮ ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆ ಇದೆ. ಅದಕ್ಕೆ ಎಫ್‌ಐಆರ್ ಅಗತ್ಯವಿದೆ. ಕಾನೂನಿನ ನಿಯಮವು ಸಮಾಜದ ಅಡಿಪಾಯವಾಗಿದೆ. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಕಾಯುತ್ತಿದ್ದಾರೆ. ಜನರಿಗೆ ಸಂಪೂರ್ಣ ಸತ್ಯ ಹೊರಬರುವುದನ್ನು ಹೊರತುಪಡಿಸಿ ಬೇರೇನೂ ಬೇಕಾಗಿಲ್ಲ ಎಂದ ಜಗದೀಪ್ ಧಂಖರ್ ಆಂತರಿಕ ತನಿಖೆ ನಡೆಸುವ ಮೂವರು ನ್ಯಾಯಾಧೀಶರ ಸಮಿತಿಯ ಕಾನೂನು ಸ್ಥಿತಿಯನ್ನು ಪ್ರಶ್ನಿಸಿದ್ದಾರೆ. ಇದು ಯಾವುದೇ ಸಾಂವಿಧಾನಿಕ ನಿಬಂಧನೆ ಅಥವಾ ಕಾನೂನಿನ ಅಡಿಯಲ್ಲಿ ಸ್ಥಾಪಿಸಲ್ಪಟ್ಟಿಲ್ಲ ಎಂದು ಅವರು ಹೇಳಿದ್ದಾರೆ.
ನವದೆಹಲಿ, ಮೇ 19: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮ ಅವರ ಮನೆಯಲ್ಲಿ ಕಂತೆಗಟ್ಟಲೆ ಹಣ ಸಿಕ್ಕ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಮತ್ತೆ ಉಪರಾಷ್ಟ್ರಪತಿ ಜಗದೀಪ್ ಧಂಖರ್ (Jagdeep Dhankhar) ಆಕ್ರೋಶ ಹೊರಹಾಕಿದ್ದಾರೆ. ಈ ವಿಷಯದಲ್ಲಿ ಇನ್ನೂ ಯಾಕೆ ಎಫ್‌ಐಆರ್ ನೋಂದಣಿ ಮಾಡಿಲ್ಲ? ಆ ವ್ಯಕ್ತಿಯ ಹಿಂದಿರುವ ದೊಡ್ಡ ಕೈ ಯಾರದ್ದು? ಎಂದು ಜಗದೀಪ್ ಧಂಖರ್ ಪ್ರಶ್ನಿಸಿದ್ದಾರೆ. ನವದೆಹಲಿಯಲ್ಲಿ ಇಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಜಗದೀಪ್ ಧಂಖರ್, ಆಗಿನ ದೆಹಲಿ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ದೊಡ್ಡ ಪ್ರಮಾಣದ ಸುಟ್ಟ ನಗದು ಪತ್ತೆಯಾದ ಬಗ್ಗೆ ಎಫ್‌ಐಆರ್ ದಾಖಲಾಗದೆ ಇರುವುದನ್ನು ಪ್ರಶ್ನಿಸಿದ್ದಾರೆ. “ನಮ್ಮ ದೇಶದಲ್ಲಿ ಕಾನೂನಿನ ನಿಯಮ ಮತ್ತು ಕ್ರಿಮಿನಲ್ ನ್ಯಾಯ ವ್ಯವಸ್ಥೆ ಇದೆ. ಅದಕ್ಕೆ ಎಫ್‌ಐಆರ್ ಅಗತ್ಯವಿದೆ. ಕಾನೂನಿನ ನಿಯಮವು ಸಮಾಜದ ಅಡಿಪಾಯವಾಗಿದೆ. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಕಾಯುತ್ತಿದ್ದಾರೆ. ಜನರಿಗೆ ಸಂಪೂರ್ಣ ಸತ್ಯ ಹೊರಬರುವುದನ್ನು ಹೊರತುಪಡಿಸಿ ಬೇರೇನೂ ಬೇಕಾಗಿಲ್ಲ ಎಂದ ಜಗದೀಪ್ ಧಂಖರ್ ಆಂತರಿಕ ತನಿಖೆ ನಡೆಸುವ ಮೂವರು ನ್ಯಾಯಾಧೀಶರ ಸಮಿತಿಯ ಕಾನೂನು ಸ್ಥಿತಿಯನ್ನು ಪ್ರಶ್ನಿಸಿದ್ದಾರೆ. ಇದು ಯಾವುದೇ ಸಾಂವಿಧಾನಿಕ ನಿಬಂಧನೆ ಅಥವಾ ಕಾನೂನಿನ ಅಡಿಯಲ್ಲಿ ಸ್ಥಾಪಿಸಲ್ಪಟ್ಟಿಲ್ಲ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ