ನಟಿ ಮೇಘನಾ ರಾಜ್ (Meghana Raj) ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಅನೇಕ ಫೋಟೋ ಹಾಗೂ ವಿಡಿಯೋಗಳನ್ನು ಅವರು ಹಂಚಿಕೊಳ್ಳುತ್ತಾರೆ. ಪುತ್ರ ರಾಯನ್ ರಾಜ್ ಸರ್ಜಾನ (Raayan Raj Sarja) ದಿನಚರಿ ಬಗ್ಗೆ ಅಪ್ಡೇಟ್ ನೀಡುತ್ತಾರೆ. ಈಗ ಪುತ್ರನಿಗೆ ಅವರು ರಾಷ್ಟ್ರ ಧ್ವಜ (National Flag) ನೀಡಿದ್ದಾರೆ. 75ನೇ ವರ್ಷದ ಸ್ವಾತಂತ್ರೋತ್ಸವದ ಪ್ರಯುಕ್ತ ಈ ವಿಶೇಷ ವಿಡಿಯೋವನ್ನು ಮೇಘನಾ ರಾಜ್ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ. ಪುತ್ರನ ಆರೈಕೆಯ ಜೊತೆಜೊತೆಗೆ ಹಲವು ಸಿನಿಮಾ ಕೆಲಸಗಳಲ್ಲೂ ಮೇಘನಾ ರಾಜ್ ಬ್ಯುಸಿ ಆಗಿದ್ದಾರೆ.
Published On - 3:13 pm, Mon, 15 August 22