ತಣ್ಣೂರು ಮೊರಾರ್ಜಿ ದೇಸಾಯಿ ವಸತಿ ಶಾಲೆ ವಾರ್ಡನ್ ನಾಪತ್ತೆ, ಫೋನಲ್ಲಿ ತರಾಟೆಗೆ ತೆಗೆದುಕೊಂಡ ದರ್ಶನ್ ಪುಟ್ಟಣ್ಣಯ್ಯ
ಹಾಸ್ಟೆಲ್ ವಾರ್ಡನ್ ಪ್ರಾಯಶಃ ಶಾಸಕರ ಸರ್ಪ್ರೈಸ್ ಭೇಟಿ ನೀರೀಕ್ಷಿಸಿರಲಿಲ್ಲ. ಶಾಸಕರ ಗದರುತ್ತಿದ್ದರೆ ಅವನಿಗೆ ಮಾತೇ ಹೊರಡುತ್ತಿಲ್ಲ. ತನ್ನಮ್ಮನನ್ನು ಅಲ್ಲಿ ಬಿಟ್ಟು ಅವನು ಬೇರೆ ಕಡೆಯೂ ಕೆಲಸ ಮಾಡುತ್ತಿರಬಹುದು. ಅವನು ಮತ್ತು ಅವನ ತಾಯಿ ಹಾಸ್ಟೆಲ್ ಆವರಣದೊಳಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಅಂತ ಶಾಸಕ ದರ್ಶನ್ ಪುಟ್ಟಣಯ್ಯ ಅವನಿಗೆ ಎಚ್ಚರಿಕೆ ನೀಡುತ್ತಾರೆ.
ಮಂಡ್ಯ: ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನಮ್ಮ ನಾಡಿನ ಕೆಲವೇ ಸುಸಂಸ್ಕತ ರಾಜಕಾರಣಿಗಳಲ್ಲಿ ಒಬ್ಬರು. ವಿದೇಶದಲ್ಲಿ ಅಧ್ಯಯನ ಮಾಡಿ ಅಲ್ಲೇ ಕೆಲಸ ಕೂಡ ಮಾಡಿಕೊಂಡಿದ್ದರು. ಸ್ವದೇಶಕ್ಕೆ ವಾಪಸ್ಸಾಗಿ ಶಾಸಕರಾಗಿರುವ ಅವರು ಕ್ಷೇತ್ರದ ತಣ್ಣೂರಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಸರ್ಪ್ರೈಸ್ ಭೇಟಿ ನೀಡಿದಾಗ ಅಲ್ಲ್ಲಿನ ಅವ್ಯವಸ್ಥೆಯ ಬಗ್ಗೆ ಮಕ್ಕಳು ಹೇಳಿಕೊಂಡಿದ್ದಾರೆ. ಹಾಸ್ಟೆಲ್ ವಾರ್ಡನ್ ಯಾವಾಗಲೋ ಒಮ್ಮೆ ಬರುತ್ತಾನಂತೆ ಮತ್ತು ಮಕ್ಕಳನ್ನು ನೋಡಿಕೊಳ್ಳಲು ತನ್ನ ತಾಯಿಯನ್ನು ಅಲ್ಲಿ ಬಿಟ್ಟಿದ್ದಾನಂತೆ. ಈಯಮ್ಮ ಮಕ್ಕಳಿಗೆ ಮನಬಂದಂತೆ ಬಯ್ಯುತ್ತಾಳೆ ಮತ್ತು ಗದರುತ್ತಾಳೆ. ಮಕ್ಕಳ ದೂರುಗಳನ್ನು ಕೇಳಿದ ಬಳಿಕ ವ್ಯಗ್ರರಾದ ದರ್ಶನ್, ವಾರ್ಡನ್ಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪದೇ ಪದೇ ಅಮೆರಿಕಕ್ಕೆ ಹೋಗುವುದು ತಪ್ಪೆಂದು ಗೊತ್ತಿದೆ, ಆದರೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೊಟ್ಟ ಕಾರಣ ಇಲ್ಲಿದೆ