‘ಅವತಾರ ಪುರುಷ’ ಸಿನಿಮಾ ನೋಡಿ ಕಣ್ಣಲ್ಲಿ ನೀರು ಬರುವಷ್ಟು ನಕ್ಕುಬಿಟ್ಟೆ ಎಂದ ಮಿಲನಾ ನಾಗರಾಜ್

Edited By:

Updated on: May 06, 2022 | 2:35 PM

‘ಅವತಾರ ಪುರುಷ’ ಸಿನಿಮಾ ಮೇ 6ರಂದು ತೆರೆಗೆ ಬಂದಿದೆ. ಈ ಸಿನಿಮಾದ ವಿಶೇಷ ಶೋಅನ್ನು ಸೆಲೆಬ್ರಿಟಿಗಳಿಗೋಸ್ಕರ ಮೇ 5ರಂದು ಆಯೋಜನೆ ಮಾಡಲಾಗಿತ್ತು. ಮಿಲನಾ ನಾಗರಾಜ್-ಡಾರ್ಲಿಂಗ್​ ಕೃಷ್ಣ ದಂಪತಿ, ‘ಆ ದಿನಗಳು’ ಚೇತನ್ ಸೇರಿ ಅನೇಕರು ಸಿನಿಮಾ ವೀಕ್ಷಿಸಿದರು.

‘ಅವತಾರ ಪುರುಷ’ ಸಿನಿಮಾ (Avatar Purusha) ಮೇ 6ರಂದು ತೆರೆಗೆ ಬಂದಿದೆ. ಈ ಸಿನಿಮಾದ ವಿಶೇಷ ಶೋಅನ್ನು ಸೆಲೆಬ್ರಿಟಿಗಳಿಗೋಸ್ಕರ ಮೇ 5ರಂದು ಆಯೋಜನೆ ಮಾಡಲಾಗಿತ್ತು. ಮಿಲನಾ ನಾಗರಾಜ್-ಡಾರ್ಲಿಂಗ್​ ಕೃಷ್ಣ ದಂಪತಿ, ‘ಆ ದಿನಗಳು’ ಚೇತನ್ ಸೇರಿ ಅನೇಕರು ಸಿನಿಮಾ ವೀಕ್ಷಿಸಿದರು. ‘ಸುನಿ (Simle Suni) ಅವರ ಸಾಕಷ್ಟು ಸಿನಿಮಾಗಳನ್ನು ನೋಡಿದ್ದೇವೆ. ಆದರೆ, ಈ ಸಿನಿಮಾ ನೋಡಿದ ನಂತರದಲ್ಲಿ ಇದು ಸುನಿ ಅವರೇ ನಿರ್ದೇಶನ ಮಾಡಿದ್ದಾ ಎನ್ನುವ ಪ್ರಶ್ನೆ ಮೂಡಿತು. ಅಷ್ಟು ಭಿನ್ನವಾಗಿ ಸಿನಿಮಾ ಮೂಡಿ ಬಂದಿದೆ. ಮುಂದೇನಾಗುತ್ತದೆ ಎನ್ನುವ ಕುತೂಹಲ ನಮ್ಮಲ್ಲಿ ಮೂಡುತ್ತಾ ಹೋಗುತ್ತಿತ್ತು’ ಎಂದಿದ್ದಾರೆ ಡಾರ್ಲಿಂಗ್​ ಕೃಷ್ಣ. ಸಿನಿಮಾ ನೋಡುವಾಗ ಕಣ್ಣಲ್ಲಿ ನೀರು ಬರುವಷ್ಟು ನಕ್ಕಿದ್ದಾಗಿ ಮಿಲನಾ ನಾಗರಾಜ್ ಹೇಳಿದ್ದಾರೆ.

ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

Loading...
Unable to load recommendations.
Follow Us
TV9 Web

TV9 Kannada

Read More