ಹಾಸನಾಂಬೆ ದರ್ಶನ ಮಾಡಿ ವ್ಯವಸ್ಥೆಯನ್ನು ಕೊಂಡಾಡಿದ ನಟಿ ಮಿಲನಾ

Updated on: Oct 22, 2025 | 3:29 PM

Milana Nagaraj: ನಟಿ ಮಿಲನಾ ನಾಗರಾಜ್ ಮೂಲತಃ ಹಾಸನದವರು. ಇಂದು (ಅಕ್ಟೋಬರ್ 22) ರಂದು ಮಿಲನಾ ನಾಗರಾಜ್ ಅವರು ಹಾಸನಾಂಬೆ ದರ್ಶನ ಮಾಡಿದರು. ಬಳಿಕ ಮಾಧ್ಯಮದವರೊಟ್ಟಿಗೆ ಮಾತನಾಡಿದ ಮಿಲನಾ, ಹಾಸನಾಂಭೆ ಕ್ಷೇತ್ರದೊಂದಿಗೆ ತಮಗಿರುವ ನಂಟಿನ ಬಗ್ಗೆ ಮಾತನಾಡಿದರು. ಜೊತೆಗೆ ದರ್ಶನಕ್ಕೆ ಮಾಡಲಾಗಿರುವ ವ್ಯವಸ್ಥೆಯ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿದರು.

ನಟಿ ಮಿಲನಾ ನಾಗರಾಜ್ (Milana Nagaraj) ಮೂಲತಃ ಹಾಸನದವರು. ಇಂದು (ಅಕ್ಟೋಬರ್ 22) ರಂದು ಮಿಲನಾ ನಾಗರಾಜ್ ಅವರು ಹಾಸನಾಂಬೆ ದರ್ಶನ ಮಾಡಿದರು. ಬಳಿಕ ಮಾಧ್ಯಮದವರೊಟ್ಟಿಗೆ ಮಾತನಾಡಿದ ಮಿಲನಾ, ‘ನಾನು ಹಾಸನದವಳು, ನಾನು ಬಾಲಕಿ ಆಗಿದ್ದಾಗಿನಿಂದಲೂ ಹಾಸನಾಂಬೆ ದರ್ಶನ ಮಾಡುತ್ತಾ ಬಂದಿದ್ದೇನೆ. ಇದು ನನಗೆ ಹೊಸದಲ್ಲ. ಸಾಮಾನ್ಯ ದೇವಾಲಯ ಆಗಿದ್ದಾಗಿನಿಂದಲೂ ಇಲ್ಲಿಗೆ ಬರುತ್ತಿದ್ದೇನೆ. ಈ ಬಾರಿ ಬಹಳ ಜನ ದರ್ಶನಕ್ಕೆ ಬಂದಿದ್ದಾರೆ. ಆದರೆ ಇಲ್ಲಿನ ವ್ಯವಸ್ಥೆಯನ್ನು ಚೆನ್ನಾಗಿ ಮಾಡಿದ್ದಾರೆ. ಸಚಿವ ಕೃಷ್ಣಬೈರೇಗೌಡರು ಚೆನ್ನಾಗಿ ಉಸ್ತುವಾರಿ ನಿರ್ವಹಿಸಿದ್ದಾರೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ