ದೊಡ್ಡಬಳ್ಳಾಪುರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಹಲವೆಡೆ ಲಘು ಭೂಕಂಪನ
ಮುಖ್ಯಾಂಶಗಳು
- ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಲಘು ಭೂಕಂಪನ
- ಲಘು ಭೂಕಂಪನದ ಬಗ್ಗೆ ಕೆಎಸ್ಎನ್ಡಿಎಂಸಿಯಿಂದ ಮಾಹಿತಿ
- ಗ್ರಾಮಸ್ಥರು ಆತಂಕ
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಸೋಮೇನಹಳ್ಳಿ, ತರಿದಾಳು, ಅಲಿಪುರ ಸುತ್ತಮುತ್ತ ಬೆಳಿಗಿನ ಜಾವ ಲಘು ಭೂಕಂಪನ ಅನುಭವವಾಗಿದೆ. ಗ್ರಾಮಸ್ಥರು ಏನೋ ಕಂಪಿಸಿದ ಅನುಭವವಾಯಿತೆಂದು ತಿಳಿಸಿದ್ದು, ಕೆ.ಎಸ್.ಎನ್.ಡಿ.ಎಂ.ಸಿ. ಕೂಡ ಈ ಕುರಿತು ಮಾಹಿತಿ ನೀಡಿದೆ. ಜಿಲ್ಲೆಯಲ್ಲಿ ಲಘು ಭೂಕಂಪನ ಸಂಭವಿಸಿದ್ದು ಆತಂಕ ಸೃಷ್ಟಿಸಿದೆ.
ಚಿಕ್ಕಬಳ್ಳಾಪುರ, ಅಕ್ಟೋಬರ್ 24: ದೊಡ್ಡಬಳ್ಳಾಪುರ ತಾಲೂಕಿನ ಹಲವೆಡೆ ಈಗಾಗಲೇ ಎರಡೆರಡು ಸಲ ಭೂಕಂಪನ ಉಂಟಾಗಿದೆ. ಈ ಬೆನ್ನಲ್ಲೇ ಇತ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಹಲವೆಡೆ ಕೂಡ ಲಘು ಭೂಕಂಪನವಾಗಿದೆ. ಜಿಲ್ಲೆಯ ಗೌರಿಬಿದನೂರು ತಾಲೂಕಿನ ಸೋಮೇನಹಳ್ಳಿ, ತರಿದಾಳು ಮತ್ತು ಅಲಿಪುರ ಗ್ರಾಮದ ಸುತ್ತಮುತ್ತ ಬೆಳಿಗ್ಗೆ 3.29ರ ಸಮಯದಲ್ಲಿ ಲಘು ಭೂಕಂಪನ ಅನುಭವವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದಿಂದ ಮಾಹಿತಿ ನೀಡಲಾಗಿದೆ. ಏನೋ ಕಂಪಿಸಿದ ಅನುಭವ ಆಯಿತು ಎಂದು ಗ್ರಾಮಸ್ಥರು ಕೂಡ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us