ಬೆಂಗಳೂರು ಕರಗ ಉತ್ಸವದಲ್ಲಿ ಹಿಂದೂ ಹಾಗೂ ಮುಸ್ಲಿಂ ಭಾಯಿ ಭಾಯಿ: ಮಸ್ತಾನ್ ಸಾಬ್ ದರ್ಗಾದಲ್ಲಿ ದ್ರೌಪದಿಗೆ ಧೂಪಾರತಿ

|

Updated on: Apr 07, 2023 | 8:55 AM

ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಿನಲ್ಲಿ ಐತಿಹಾಸಿಕ ಬೆಂಗಳೂರು ಕರಗ ಅದ್ಧೂರಿಯಾಗಿ ಜರುಗಿದೆ. ಇದಕ್ಕೆ ಹಿಂದೂ ಮುಸ್ಲಿಂ ಜನರರ ಭಾವೈಕ್ಯತೆಗೆ ಸಾಕ್ಷಿಯಾಗಿದೆ.

ಬೆಂಗಳೂರು: ವಿಶ್ವವಿಖ್ಯಾತ ಬೆಂಗಳೂರು ಕರಗವೂ ಅದ್ದೂರಿಯಾಗಿ ನಡೆದಿದೆ. ಚೈತ್ರ ಪೌರ್ಣಿಮೆಯ ಬೆಳದಿಂಗಳ ಬೆಳಕಿನಲ್ಲಿ ಐತಿಹಾಸಿಕ ಬೆಂಗಳೂರು ಕರಗ ಅದ್ಧೂರಿಯಾಗಿ ಜರುಗಿತ್ತು. ನಿನ್ನೆ ಮಧ್ಯರಾತ್ರಿ 2 ಗಂಟೆ 24 ನಿಮಿಷಕ್ಕೆ ಸರಿಯಾಗಿ ದ್ರೌಪದಿ ದೇವಿ ಕರಗ ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ಹೊರಗೆ ಬಂತು.. 12ನೇ ಬಾರಿ ಕರಗ ಹೊತ್ತ ಪೂಜಾರಿ ಜ್ಞಾನೇಂದ್ರ ಗಾಂಭೀರ್ಯದಿಂದ್ಲೇ ಹಜ್ಜೆ ಹಾಕಿದ್ರು.

ವೀರಕುಮಾರರು ಅಲಗು ಸೇವೆ ಮಾಡಿದ್ರು. ನಗರದ ಪ್ರಮುಖ ಬೀದಿಗಳ ತುಂಬೆಲ್ಲ ಭಕ್ತಸಾಗರವೇ ತುಂಬಿತ್ತು. ಇದೇ ವೇಳೆ ಕಾಟನ್ ಪೇಟೆಯಲ್ಲಿರುವ ತವಕಲ್ ಹಜರತ್ ಮಸ್ತಾನ್ ದರ್ಗಾಕ್ಕೆ ಭೇಟಿ ನೀಡಿ ಕರಗ ಪ್ರದಕ್ಷಿಣೆ ಹಾಕಿತು. ದ್ರೌಪದಿ ದೇವಿ ಕರಗಕ್ಕೆ ಮಸ್ತಾನ್‌ ಸಾಬ್ ದರ್ಗಾದಲ್ಲಿ ಕರಗ ಶಕ್ತ್ಯೋತ್ಸವಕ್ಕೆ ಸ್ವಾಗತ ಕೋರಲಾಯ್ತು. ಈ ಬಾರಿ ರಂಜನ್ ಉಪವಾಸ ವೇಳೆ ಕರಗದಿಂದ‌ ದರ್ಗಾದ‌ ಪ್ರದಕ್ಷಿಣೆ ವಿಶೇಷವಾಗಿತ್ತು.

Follow us on