ಬಿಜೆಪಿ ಬ್ಯಾನರ್ ಇಲ್ಲದೆ ತಮ್ಮ ಕ್ಷೇತ್ರದಲ್ಲಿ ಆಪ್ತರೊಂದಿಗೆ ಸಭೆಗಳನ್ನು ನಡೆಸಿ ಕುತೂಹಲ ಸೃಷ್ಟಿಸುತ್ತಿರುವ ಸಚಿವ ಕೆಸಿ ನಾರಾಯಣಗೌಡ
ಇತ್ತೀಚಿನ ಬೆಳವಣಿಗೆ ಎಂದರೆ ಸಚಿವ ಕೆಸಿ ನಾರಾಯಣ ಗೌಡ ಪಕ್ಷದ ಅಥವಾ ಸರ್ಕಾರದ ಬ್ಯಾನರ್ ಇಲ್ಲದೆ ತಮ್ಮ ಕ್ಷೇತ್ರದಲ್ಲಿ ಸಭೆಗಳನ್ನು ನಡೆಸುತ್ತಿರುವುದು.
ಮಂಡ್ಯ: ಬಸವರಾಜ ಬೊಮ್ಮಾಯಿ (Basavaraj Bommai) ಸಂಪುಟದಲ್ಲಿ ಸಚಿವರಾಗಿರುವ ಕೆಸಿ ನಾರಾಯಣಗೌಡರ (KC Narayan Gowda) ನಡೆಗಳು ಭಾರೀ ಕುತೂಹಲ ಸೃಷ್ಟಿಸುತ್ತಿವೆ. ಅವರು ಕಾಂಗ್ರೆಸ್ (Congress) ಸೇರುತ್ತಾರೆಂಬ ಸುದ್ದಿ ರಾಜ್ಯದೆಲ್ಲೆಡೆ ಹಬ್ಬಿದೆ. ಆದರೆ ಅವರಾಗಲೀ, ಕಾಂಗ್ರೆಸ್ ಪಕ್ಷದ ನಾಯಕರಾಗಲೀ ಅದನ್ನು ಖಚಿತಪಡಿಸಿಲ್ಲ. ಇತ್ತೀಚಿನ ಬೆಳವಣಿಗೆ ಎಂದರೆ ಸಚಿವರು ಪಕ್ಷದ ಅಥವಾ ಸರ್ಕಾರದ ಬ್ಯಾನರ್ ಇಲ್ಲದೆ ತಮ್ಮ ಕ್ಷೇತ್ರದಲ್ಲಿ ಸಭೆಗಳನ್ನು ನಡೆಸುತ್ತಿರುವುದು. ಲಭ್ಯವಿರುವ ಮಾಹಿತಿ ಪ್ರಕಾರ ಅವರು ಸಂತೆಬಾಚನಹಳ್ಳಿ, ಶೀಳನೆರೆ, ಬೂಕನಕೆರೆ, ವಿಠಲಾಪುರ ಮೊದಲಾದ ಕಡೆಗಳಲ್ಲಿ ಪಕ್ಷದ ಬ್ಯಾನರ್ ಇಲ್ಲದೆ ತಮ್ಮ ಆಪ್ತರೊಂದಿಗೆ ಸಭೆಗಳನ್ನು ನಡೆಸಿದ್ದಾರೆ. ಇದರ ಅರ್ಥವೇನು ಸಚಿವರೇ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ