Yadgir: ಮುದ್ನಾಳ್ ಗ್ರಾಮದ ದಲಿತ ಕುಟುಂಬವೊಂದರ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ

Yadgir: ಮುದ್ನಾಳ್ ಗ್ರಾಮದ ದಲಿತ ಕುಟುಂಬವೊಂದರ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 06, 2023 | 11:45 AM

ಸೋಮವಾರ ಸಮಾಜ ಕಲ್ಯಾಣ ಖಾತೆ ಸಚಿವ ಶ್ರೀನಿವಾಸ ಪೂಜಾರಿ ಅವರು ಯಾದಗಿರಿ ಜಿಲ್ಲೆಯ ಮುದ್ನಾಳ್ ಗ್ರಾಮದಲ್ಲಿ ವಾಸವಾಗಿರುವ ಹಣುಮಂತ ಎನ್ನುವವರ ದಲಿತ ಕುಟುಂಬದ ಮನೆಗೆ ಹೋಗಿ ಉಪಹಾರ ಸೇವಿಸಿದ್ದಾರೆ.

ಯಾದಗಿರಿ:  ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ (Amrit Mahotsav) ಆಚರಿಸುತ್ತಿದೆ. ಆದರೆ ಇಷ್ಟು ವರ್ಷಗಳ ನಂತರವೂ ರಾಜಕೀಯ ಮುಖಂಡನೊಬ್ಬ ಯಾವುದಾದರೂ ಒಂದೂರಲ್ಲಿ ದಲಿತರ ಮನೆಗೆ ಭೇಟಿ ನೀಡಿದರೆ, ಅವರ ಮನೆಯಲ್ಲಿ ಊಟ-ತಿಂಡಿ ತಿಂದರೆ ಅದು ಸುದ್ದಿಯಾಗಿಬಿಡುತ್ತದೆ. ಅದರರ್ಥ ಅಸ್ಪೃಶ್ಯತೆ (untouchability) ಪಿಡುಗು ನಮ್ಮ ವ್ಯವಸ್ಥೆಯಲ್ಲಿ ಇನ್ನೂ ಜೀವಂತವಾಗಿದೆ. ಇಲ್ಲದಿದ್ದರೆ ಮಂತ್ರಿಗಳು, ಮುಖ್ಯಮಂತ್ರಿಗಳು ದಲಿತರ ಮನೆಗೆ ಭೇಟಿ ನೀಡಿದರೆ ಅದನ್ನು ಯಾಕೆ ಸಾಮಾನ್ಯ ವಿಷಯದಂತೆ ಪರಿಗಣಿಸಲಾಗುವುದಿಲ್ಲ? ನಮ್ಮ ನಾಯಕರಿಗೆ ಅದೂ ಒಂದು ಸಾಧನೆಯೇ? ಸೋಮವಾರ ಸಮಾಜ ಕಲ್ಯಾಣ ಖಾತೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಯಾದಗಿರಿ ಜಿಲ್ಲೆಯ ಮುದ್ನಾಳ್ ಗ್ರಾಮದಲ್ಲಿ ವಾಸವಾಗಿರುವ ಹಣುಮಂತ ಎನ್ನುವವರ ದಲಿತ ಕುಟುಂಬದ ಮನೆಗೆ ಹೋಗಿ ಉಪಹಾರ ಸೇವಿಸಿದ್ದಾರೆ. ಇದು ಚುನಾವಣೆ ಸಮಯ, ಇಂಥ ಸನ್ನಿವೇಶಗಳು ನಮಗೆ ಪ್ರತಿದಿನ ಕಾಣಲಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ