ದೆಹಲಿ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಗಂಟೆಗಟ್ಟಲೆ ಮಾತುಕತೆ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ

|

Updated on: Feb 11, 2025 | 9:30 PM

ಸತೀಶ್ ಜಾರಕಿಹೊಳಿ ಮತ್ತು ಅವರ ಜೊತೆ ಕೆಲ ಶಾಸಕರು ದುಬೈ ಪ್ರವಾಸ ಹೋಗುವ ಬಗ್ಗೆ ವದಂತಿ ಹರಡಿತ್ತು, ಯಾವಾಗ ಹೋಗ್ತಾ ಇದ್ದೀರಿ ಅಂತ ಕೇಳಿದರೆ, ಅದೆಲ್ಲ ಸುಳ್ಳು ಸುದ್ದಿ, ಯಾರೂ ಎಲ್ಲೂ ಹೋಗುತ್ತಿಲ್ಲ, ಕೇಳಿದ್ದನ್ನೇ ಎಷ್ಟು ಸಲ ಅಂತ ಕೇಳುತ್ತೀರಿ ಅಂತ ಸಚಿವ ಹೇಳಿದರು. ಪತ್ರಕರ್ತರಿಗೆ ಹೆದರಿ ವಿದೇಶಕ್ಕೆ ಹೋಗದಂತಾಗಿದೆ, ಬೇರೆ ಶಾಸಕರೆಲ್ಲ ಗುಂಪುಗುಂಪಾಗಿ ಹೋಗಿ ಬಂದರೂ ತಾನು ಮಾತ್ರ ಹೋಗಲಿಲ್ಲ ಎಂದು ಜಾರಕಿಹೊಳಿ ನಗುತ್ತಾ ಹೇಳಿದರು.

ನವದೆಹಲಿ: ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಅವರು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರನ್ನು ಭೇಟಿಯಾಗಿ ಸುದೀರ್ಘವಾದ ಮಾತುಕತೆ ನಡೆಸಿದ್ದಾರೆ. ಏನೆಲ್ಲ ಮಾತಾಡಿದ್ದು ಸರ್ ಅಂತ ಮಾಧ್ಯಮದವರು ಕೇಳಿದರೆ ಚಾಣಾಕ್ಷ ರಾಜಕಾರಣಿ ಜಾರಕಿಹೊಳಿ ಗುಟ್ಟು ಬಿಟ್ಟುಕೊಡಲ್ಲ. ದೆಹಲಿಗೆ ಬಂದಾಗಲೆಲ್ಲ ವರಿಷ್ಠರು ಅಪಾಯಿಂಟ್ಮೆಂಟ್ ನೀಡುತ್ತಾರೆ, ರಾಜ್ಯದ ರಾಜಕೀಯ ವಿದ್ಯಮಾನಗಳ ಚರ್ಚೆ ನಡೆಯುತ್ತದೆ, ಬೀದರ್ ನಿಂದ ಹಿಡಿದು ಚಾಮರಾಜನಗರದವರೆಗೆ ಏನೆಲ್ಲ ನಡೆಯುತ್ತಿದೆ ಅಂತ ಕೇಳುತ್ತಾರೆ ಎಂದು ಸತೀಶ್ ಹೇಳಿದರು. ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ತಮ್ಮ ಕೆಲಸದ ನಿಮಿತ್ತ ದೆಹಲಿಗೆ ಬಂದಿರಬಹುದು, ತಾನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಲು ಬಂದಿದ್ದು ಎಂದು ಜಾರಕಿಹೊಳಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಸತೀಶ್ ಜಾರಕಿಹೊಳಿ ಮಗ ರಾಹುಲ್‌ ರಾಜಕೀಯಕ್ಕೆ: ಯುವ ಕಾಂಗ್ರೆಸ್ ಘಟಕಕ್ಕೆ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ