Minister on joining Congress: ಕಾಂಗ್ರೆಸ್ ಪಕ್ಷ ಸೇರ್ತೀರಾ ಅಂತ ಕೇಳಿದ್ದಕ್ಕೆ ವಿ ಸೋಮಣ್ಣ ಸಮಪರ್ಕ ಉತ್ತರ ನೀಡಲಿಲ್ಲ

ಅರುಣ್​ ಕುಮಾರ್​ ಬೆಳ್ಳಿ

Updated on: Mar 06, 2023 | 3:04 PM

ನೀವು ಹರಡುವ ವದಂತಿಗಳಿಗೆ ಉತ್ತರ ಕೊಡಲಾಗುತ್ತಾ? ನಾನು ಯಾವತ್ತಾದರು ಕಾಂಗ್ರೆಸ್ ಸೇರುವ ಬಗ್ಗೆ ಮಾತಾಡಿದ್ದೀನಾ? ಅಂತ ಮರುಪ್ರಶ್ನೆ ಹಾಕಿ ಸೋಮಣ್ಣ ಅಲ್ಲಿಂದ ಹೊರಟರು.

ಬೆಂಗಳೂರು: ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ವಸತಿ ಖಾತೆ ಸಚಿವರಾಗಿರುವ ವಿ ಸೋಮಣ್ಣ (V Somanna) ಅವರು ಬಿಜೆಪಿ ಸೇರುವ ಬಗ್ಗೆ ದಟ್ಟ ವದಂತಿಗಳು ಹಬ್ಬಿವೆ. ನಿಮಗೆ ಗೊತ್ತಿರಬಹುದು, ಸಂಪುಟದ ಎಲ್ಲ ಸಚಿವರು ಪಕ್ಷದ ವಿಜಯ ಸಂಕಲ್ಪ ಯಾತ್ರೆಯಲ್ಲಿ (Vijay Sankalp Yatre) ಪಾಲ್ಗೊಳ್ಳುತ್ತಿದ್ದರೆ ಸೋಮಣ್ಣ ಮಾತ್ರ ನಿನ್ನೆಯವರೆಗೆ ದೂರವೇ ಉಳಿದಿದ್ದರು. ಇಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳ ಕೈಗೆ ಸಿಕ್ಕ ಸಚಿವರು ಕಾಂಗ್ರೆಸ್ ಸೇರುವ ಬಗ್ಗೆ ಕೇಳಿದ ಪ್ರಶ್ನೆಗೆ ಸಮರ್ಪಕವಾದ ಉತ್ತರ ನೀಡಲಿಲ್ಲ. ನೀವು ಹರಡುವ ವದಂತಿಗಳಿಗೆ (rumours) ಉತ್ತರ ಕೊಡಲಾಗುತ್ತಾ? ನಾನು ಯಾವತ್ತಾದರು ಕಾಂಗ್ರೆಸ್ ಸೇರುವ ಬಗ್ಗೆ ಮಾತಾಡಿದ್ದೀನಾ? ಅಂತ ಮರುಪ್ರಶ್ನೆ ಹಾಕಿ ಅಲ್ಲಿಂದ ಹೊರಟರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 06, 2023 03:04 PM
Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.