Stone pelting: ಬಾಗಲಕೋಟೆ-ಮೈಸೂರು ಎಕ್ಸ್​​ಪ್ರೆಸ್​​​ ಮೇಲೆ ಕಲಬುರಗಿ ಬಳಿ ಕಳೆದ ರಾತ್ರಿ ಕಲ್ಲು ತೂರಾಟ, ಪ್ರಯಾಣಿಕರು ಸುರಕ್ಷಿತ

Updated on: Jul 20, 2023 | 10:59 AM

ಸೋಜಿಗದ ಸಂಗತಿಯೆಂದರೆ, ವಾಡಿ ಜಂಕ್ಷನ್ ನಲ್ಲಿದ್ದ ರೇಲ್ವೇಸ್ ಆಧಿಕಾರಿಗಳಿಗೆ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ

ಕಲಬುರಗಿ: ಬಾಗಲಕೋಟೆ-ಮೈಸೂರು ನಡುವೆ ಚಲಿಸುವ ಬಸವ ಎಕ್ಸ್ ಪ್ರೆಸ್ (Basava Express) ಟ್ರೈನಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ಬುಧವಾರ ರಾತ್ರಿ ಕಲಬುರಗಿ (Kalaburagi) ನಗರಕ್ಕೆ ಹತ್ತಿರದ ಬಬಲಾದ ಗ್ರಾಮದ ಬಳಿ ನಡೆದಿದೆ. ಹವಾನಿಯಂತ್ರಿತ ಬೋಗಿಯೊಂದರ (AC compartment) ಕಿಟಕಿ ಗಾಜುಗಳು ಜಖಂಗೊಂಡಿವೆಯಾದರೂ ಅದೃಷ್ಟವಶಾತ್ ಪ್ರಯಾಣಿಕರಾರೂ ಗಾಯಗೊಂಡಿಲ್ಲ. ವಾಡಿ ರೇಲ್ವೇ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಸೋಜಿಗದ ಸಂಗತಿಯೆಂದರೆ, ವಾಡಿ ಜಂಕ್ಷನ್ ನಲ್ಲಿದ್ದ ರೇಲ್ವೇಸ್ ಆಧಿಕಾರಿಗಳಿಗೆ ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಟಿವಿ9 ಕಲಬುರಗಿ ವರದಿಗಾರ ಕೇಳಿದ ಮಾಹಿತಿಗೆ ಅವರು ಅನ್ಯಮನಸ್ಕರಾಗಿ ಉತ್ತರಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More