AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಸವ ಎಕ್ಸ್​ಪ್ರೆಸ್​ನಲ್ಲಿ ನೀರಿಲ್ಲ: ವಿಡಿಯೊ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಪ್ರಯಾಣಿಕರು

ಈ ಸಮಸ್ಯೆ ಬಸವ ಎಕ್ಸ್​ಪ್ರೆಸ್​ನಲ್ಲಿ ಹಲವು ವರ್ಷಗಳಿಂದ ಇದೆ. ಆದರೆ ಇದೀಗ ವಿಡಿಯೊ ಒಂದನ್ನು ನೊಂದ ಪ್ರಯಾಣಿಕರು ಟ್ವೀಟ್ ಮಾಡಿರುವುದರಿಂದ ಸುದ್ದಿಯಾಗಿದೆ.

ಬಸವ ಎಕ್ಸ್​ಪ್ರೆಸ್​ನಲ್ಲಿ ನೀರಿಲ್ಲ: ವಿಡಿಯೊ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಪ್ರಯಾಣಿಕರು
ರೈಲಿನಲ್ಲಿ ನೀರು ಬರುತ್ತಿಲ್ಲ ಎಂದು ಪ್ರಯಾಣಿಕರು ಟ್ವೀಟ್ ಮಾಡಿದ್ದಾರೆ.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 12, 2022 | 8:21 AM

ಕಲಬುರ್ಗಿ: ಕರ್ನಾಟಕದ ದಕ್ಷಿಣ ತುದಿಯಿಂದ ವಾಯವ್ಯ ತುದಿಗೆ ಮುಟ್ಟುವ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಕರ್ನಾಟಕದ ಹಲವು ಜಿಲ್ಲೆಗಳಿಗೆ ಸಂಪರ್ಕ ಬೆಸೆಯುವ ಬಸವ ಎಕ್ಸ್​ಪ್ರೆಸ್ (ಟ್ರೇನ್ ನಂಬರ್ 17307 ಮತ್ತು 17308)​ (Basava Express) ಟೈಮ್​ ಟೇಬಲ್​ ಮೀರಿ ಸಂಚರಿಸುವುದಕ್ಕೆ ಕುಖ್ಯಾತಿ ಪಡೆದಿದೆ. ಮೈಸೂರಿನಿಂದ ಬಾಗಲಕೋಟೆಗೆ ಸುಮಾರು 1,000 ಕಿಲೋಮೀಟರ್ ಸಂಚರಿಸುವ ಈ ರೈಲಿನ ರಿಸರ್ವೇಶನ್ ಕೋಚ್​ಗಳಲ್ಲಿ ಸಾಮಾನ್ಯ ಟಿಕೆಟ್​ ಪಡೆದವರು ಪ್ರಯಾಣಿಸುವುದೂ, ರಿಸರ್ವೇಶನ್ ಮಾಡಿಸಿದ ದೂರದ ಪ್ರಯಾಣಿಕರೊಂದಿಗೆ ಪಾಸ್​ಧಾರಿಗಳು ಜಗಳ ತೆಗೆಯುವುದು ಬಸವ ಎಕ್ಸ್​ಪ್ರೆಸ್​ನಲ್ಲಿ ದೊಡ್ಡ ವಿಚಾರವೇ ಅಲ್ಲ. ತಡವಾಗಿ ಸಂಚರಿಸುವ, ಪ್ರಮುಖ ನಿಲ್ದಾಣಗಳ ಔಟರ್​ಗಳಲ್ಲಿ ಸಾಕಷ್ಟು ಸಮಯ ನಿಲ್ಲುವ ಬಸವ ಎಕ್ಸ್​ಪ್ರೆಸ್​ನ ಎಸಿ ಕೋಚ್​ನಲ್ಲಿಯೇ ನೀರು ಬರುತ್ತಿಲ್ಲ ಎಂದು ಪ್ರಯಾಣಿಕರು ಇದೀಗ ಆಕ್ರೋಶ ಹೊರಹಾಕಿದ್ದಾರೆ. ಹಲವು ವರ್ಷಗಳಿಂದ ಇದ್ದ ಈ ಸಮಸ್ಯೆಯು ಇದೀಗ ವಿಡಿಯೊ ಒಂದನ್ನು ನೊಂದ ಪ್ರಯಾಣಿಕರು ಟ್ವೀಟ್ ಮಾಡಿರುವುದರಿಂದ ಸುದ್ದಿಯಾಗಿದೆ.

‘ಇದು ಟ್ರೇನ್ ನಂಬರ್ 17307 ಬಸವ ಎಕ್ಸ್​ಪ್ರೆಸ್​ನಲ್ಲಿ ಸಂಚರಿಸುವ ಪ್ರಯಾಣಿಕರ ಪ್ರತಿದಿನದ ಸಮಸ್ಯೆ. ಎಸಿ ಕೋಚ್​ಗಳಲ್ಲಿ ನೀರು ಬರುವುದಿಲ್ಲ’ ಎಂದು ರೈಲ್ವೆ ಪ್ರಯಾಣಿಕ ಸುನಿಲ್ ಕುಲಕರ್ಣಿ 34 ಸೆಕೆಂಡ್​ಗಳ ವಿಡಿಯೊ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಟ್ವೀಟ್ ಅನ್ನು ಅವರು ರೈಲ್ವೆ ಇಲಾಖೆ, ರೈಲ್ವೆ ಸೇವಾ, ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಟ್ಯಾಗ್ ಮಾಡಿದ್ದಾರೆ. ಟ್ವೀಟ್ ಮಾಡಿ 10 ಗಂಟೆಯಾಗಿದ್ದರೂ ಯಾರೊಬ್ಬರೂ ಅವರ ಟ್ವೀಟ್​ಗೆ ಪ್ರತಿಕ್ರಿಯಿಸಿಲ್ಲ.

ಪ್ರತಿದಿನ ಮಧ್ಯಾಹ್ನ 1.25ಕ್ಕೆ ಮೈಸೂರು ಬಿಡುವ ಬಸವ ಎಕ್ಸ್​ಪ್ರೆಸ್​ (17307) ಬೆಂಗಳೂರಿಗೆ ಸಂಜೆ 4.30ಕ್ಕೆ ಬರುತ್ತದೆ. ಬೆಂಗಳೂರಿನಿಂದ ಸಂಜೆ 4.50ಕ್ಕೆ ಹೊರಟು ಮಾರನೇ ದಿನ ಬೆಳಿಗ್ಗೆ 11.10ಕ್ಕೆ ಬಾಗಲಕೋಟೆ ತಲುಪುತ್ತದೆ. ಬಾಗಲಕೋಟೆಯನ್ನು ಮಧ್ಯಾಹ್ನ 2.30ಕ್ಕೆ ಬಿಡುವ ರೈಲು (17308) ಬೆಂಗಳೂರಿಗೆ ಬೆಳಿಗ್ಗೆ 8.20ಕ್ಕೆ ಬರುತ್ತದೆ. ಮೈಸೂರನ್ನು ಬೆಳಿಗ್ಗೆ 11.45ಕ್ಕೆ ತಲುಪುತ್ತದೆ. ಸುಮಾರು 20 ಗಂಟೆಗೂ ಹೆಚ್ಚು ಕಾಲ ಸಂಚಾರದಲ್ಲಿರುವ ಈ ರೈಲು ಗಾಣಗಾಪುರ, ಮಂತ್ರಾಲಯ, ಪುಟ್ಟಪರ್ತಿ ಸೇರಿದಂತೆ ಹಲವು ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಅಷ್ಟೇ ಅಲ್ಲದೆ ವಿಜಯಪುರ, ಕಲಬುರ್ಗಿ, ರಾಯಚೂರು, ಸೊಲ್ಲಾಪುರ, ರಾಯಚೂರು, ಗುಂತಕಲ್ ಸೇರಿದಂತೆ ಹಲವು ಪ್ರಮುಖ ನಗರಗಳಿಗೆ ಪ್ರಯಾಣಿಕರನ್ನು ಕೊಂಡೊಯ್ಯುವ ಪ್ರಮುಖ ಸಂಪರ್ಕ ಸಾಧನವಾಗಿದೆ. 1017 ಕಿಲೋಮೀಟರ್​ ಅಂತರ ಕ್ರಮಿಸುವ ರೈಲಿನಲ್ಲಿ ಮೂಲಸೌಕರ್ಯಗಳು ಸರಿಯಿಲ್ಲ. ಅಧಿಕಾರಿಗಳು ಶೀಘ್ರ ಈ ಬಗ್ಗೆ ಗಮನ ಹರಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಪುಟ್ಟಪರ್ತಿ ಮಾರ್ಗವಾಗಿ ಬಸವ ಎಕ್ಸ್​ಪ್ರೆಸ್ ಸಂಚಾರ

ಮೈಸೂರು-ಬಾಗಲಕೋಟೆ ಮಾರ್ಗದಲ್ಲಿ ಸಂಚರಿಸುವ ಬಸವ ಎಕ್ಸ್​ಪ್ರೆಸ್​ನ ಮಾರ್ಗ ಬದಲಾವಣೆ ಮಾಡಲಾಗಿದ್ದು, ಇದೀಗ ಇದು ಪುಟ್ಟಪರ್ತಿಯ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣದ ಮಾರ್ಗವಾಗಿ ಸಂಚರಿಸುತ್ತಿದೆ. ಹಿಂದೂಪುರ ಮತ್ತು ಧರ್ಮಾವರಂ ನಿಲ್ದಾಣಗಳನ್ನು ಈ ಹಿಂದೆ ಬಸವ ಎಕ್ಸ್​ಪ್ರೆಸ್​ ಮಕ್ಕಾಜಿಪೇಟೆ ಮತ್ತು ನಾಗಸಮುದ್ರಂ ನಿಲ್ದಾಣದ ಮಾರ್ಗವಾಗಿ ತಲುಪುತ್ತಿತ್ತು. ಕಳೆದ ಆಗಸ್ಟ್ 26ರಿಂದ ಪುಟ್ಟಪರ್ತಿ ಮಾರ್ಗವಾಗಿ ಸಂಚರಿಸುತ್ತಿದೆ.

Published On - 8:19 am, Wed, 12 October 22

ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು
ವಿಧಾನಸಭೆ ವಿಸರ್ಜಸಿ ಚುನಾವಣೆ ಎದುರಿಸುವಂತೆ ಸರ್ಕಾರಕ್ಕೆ ಅಶ್ವಥ್ ಸವಾಲು