Young girl ಎಂದು ಚೈತ್ರಾ ಕುಂದಾಪುರ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ್ದ ಟ್ವೀಟ್ ಈಗೇಕೆ ಸದ್ದು ಮಾಡುತ್ತಿದೆ ಗೊತ್ತಾ?
ಕೇಂದ್ರ ಸರ್ಕಾರದ ವಿರುದ್ಧ 2018 ರಲ್ಲಿ ಕಾಂಗ್ರೆಸ್ ಮತ್ತು ಇತರೆ ಎಡಪಕ್ಷಗಳು ಭಾರತ್ ಬಂದ್ ನಡೆಸಿದ್ದರು. ಈ ವೇಳೆ ಉಡುಪಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿ, ಮುಂಗಟ್ಟು ಬಂದ್ ಮಾಡುವ ವೇಳೆ ಒಬ್ಬಂಟಿಯಾಗಿ ರಸ್ತೆಗಿಳಿದು ತರಾಟೆಗೆ ತೆಗೆದುಕೊಂಡಿದ್ದ ಚೈತ್ರಾ, ಮೋದಿ ಪರ ಘೋಷಣೆ ಕೂಗಿ ಕಾಂಗ್ರೆಸ್ ವಿರುದ್ಧ ಅಬ್ಬರಿಸಿದ್ದಳು.
ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅಂಡ್ ಗ್ಯಾಂಗ್ ನಿಂದ ಅಸೆಂಬ್ಲಿ ಚುನಾವಣೆಗೆ ಬಿಜೆಪಿ ಪಕ್ಷದ ಟಿಕೆಟ್ ಕೊಡಿಸುವ ಆಮಿಷದಲ್ಲಿ ಉದ್ಯಮಿ, ಹಿಂದೂ ಕಾರ್ಯಕರ್ತಗೆ ಕೋಟ್ಯಂತರ ರೂಪಾಯಿ ವಂಚನೆ ಎಸಗಿರುವ ಪ್ರಕರಣದಲ್ಲಿ ಚೈತ್ರಾ ಮತ್ತು ಗಗನ್ ಜೋಡಿ ಸಿಸಿಬಿ ವಶದಲ್ಲಿದೆ. ಯಂಗ್ ಗರ್ಲ್ ಚೈತ್ರಾ ಕುಂದಾಪುರ ಬಗ್ಗೆ 9:49 PM · Sep 10, 2018 ರಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಾಡಿದ್ದ ಟ್ವೀಟ್ ವೈರಲ್ ಆಗಿತ್ತು.
ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಉದ್ಯಮಿ ಗೋವಿಂದ ಬಾಬು ಪೂಜಾರಿ (Govinda Babu Poojary) ಅವರಿಂದ ಕೋಟ್ಯಾಂತರ ರೂಪಾಯಿ ವಂಚಿಸಿದ ಪ್ರಕರಣ ಸಂಬಂಧ ಬಂಧನಕ್ಕೊಳಗಾದ ಚೈತ್ರಾ ಕುಂದಾಪುರ (Chaitra Kundapur) ಅವರ ಒಂದೊಂದೇ ವಿಚಾರ ಬೆಳಕಿಗೆ ಬರುತ್ತಿದೆ. ಇದೀಗ, 2018 ರಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಮಾಡಿದ ಡೇರಿಂಗ್ ಗರ್ಲ್ ಎಂಬ ಟ್ವೀಟ್ ಯಂಗ್ ಗರ್ಲ್ ಚೈತ್ರಾಳ ಖ್ಯಾತಿಗೆ ಕಾರಣವಾಗಿತ್ತು ಎಂಬ ಅಂಶ ತಿಳಿದುಬಂದಿದೆ.
nirmala seetharaman tweet on young girl during bharat bandh:
The grit & dare this young girl has shown in demonstrating the trust & faith she has in our @PMOIndia @narendramodi is noteworthy. In other places too many citizens have come out today to condemn #BharatBandh. Thanks to all those who have so openly rejected @INCIndia’s hypocrisy. https://twitter.com/carmazang/status/1039176330057854976
The grit & dare this young girl has shown in demonstrating the trust & faith she has in our @PMOIndia @narendramodi is noteworthy. In other places too many citizens have come out today to condemn #BharatBandh. Thanks to all those who have so openly rejected @INCIndia’s hypocrisy. https://t.co/Fe5iGCUUN0
— Nirmala Sitharaman (@nsitharaman) September 10, 2018
ಕೇಂದ್ರ ಸರ್ಕಾರದ ವಿರುದ್ಧ 2018 ರಲ್ಲಿ ಕಾಂಗ್ರೆಸ್ ಮತ್ತು ಇತರೆ ಎಡಪಕ್ಷಗಳು ಭಾರತ್ ಬಂದ್ ನಡೆಸಿದ್ದರು. ಈ ವೇಳೆ ಉಡುಪಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಂಗಡಿ, ಮುಂಗಟ್ಟು ಬಂದ್ ಮಾಡುವ ವೇಳೆ ಒಬ್ಬಂಟಿಯಾಗಿ ರಸ್ತೆಗಿಳಿದು ತರಾಟೆಗೆ ತೆಗೆದುಕೊಂಡಿದ್ದ ಚೈತ್ರಾ, ಮೋದಿ ಪರ ಘೋಷಣೆ ಕೂಗಿ ಕಾಂಗ್ರೆಸ್ ವಿರುದ್ಧ ಅಬ್ಬರಿಸಿದ್ದಳು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ