ಮಾಡೆಲ್ ಹೌಸ್​​ಗೆ ಬೆಂಕಿ ಕೇಸ್: ಪೊಲೀಸರಿಗೆ ನೀಡಿದ್ದ ವಿಡಿಯೋ ಸೀಕ್ರೆಟ್ ಬಿಚ್ಚಿಟ್ಟ ಜನಾರ್ದನರೆಡ್ಡಿ

Updated on: Jan 25, 2026 | 12:51 PM

ಬಳ್ಳಾರಿಯ ಜಿ ಸ್ಕೇರ್ ಬಡಾವಣೆಯ ಮಾಡೆಲ್ ಹೌಸ್ ಅಗ್ನಿಪ್ರಕರಣದಲ್ಲಿ, ಜನಾರ್ದನ ರೆಡ್ಡಿ ಪೊಲೀಸರ ತನಿಖಾ ವಿಧಾನದ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಾವು ನೀಡಿದ ವಿಡಿಯೋದ ಆಧಾರದ ಮೇಲೆ ಬಂಧಿಸಲಾದವರನ್ನು ಬಲವಂತವಾಗಿ ವಿಡಿಯೋ ಮಾಡಿದವರು ಎಂದು ಹೇಳಿಸಲಾಗಿದೆ ಎಂದಿದ್ದಾರೆ. ವಿಡಿಯೋ ನೋಡಿ.

ಬಳ್ಳಾರಿ, ಜನವರಿ 25: ನಗದರಲ್ಲಿ ಜಿ ಸ್ಕೇರ್ ಬಡಾವಣೆಯಲ್ಲಿನ ಮಾಡೆಲ್ ಹೌಸ್‌ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಸಚಿವ ಜನಾರ್ದನ ರೆಡ್ಡಿ ಪೊಲೀಸರ ತನಿಖೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾವು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದ ವಿಡಿಯೋ ಆಧರಿಸಿ ಪೊಲೀಸರು ಎಂಟು ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಅಪ್ರಾಪ್ತರೂ ಸೇರಿದ್ದಾರೆ. ಆದರೆ, ಈ ವಿಡಿಯೋದಲ್ಲಿ ಇರುವವರನ್ನು ಸೈಟ್ ಇಂಜಿನಿಯರ್ ರಿಜ್ವಾನ್ ಮತ್ತು ಇಮ್ರಾನ್ ಮೂಲಕ ವಿಡಿಯೋ ಮಾಡಿದವರು ಎಂದು ಹೇಳಿಸಲಾಗಿದ್ದು, ಇದು ಸತ್ಯಕ್ಕೆ ದೂರವಾಗಿದೆ ಎಂದು ರೆಡ್ಡಿ ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.