AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಅಫ್ಘಾನ್ ಸ್ಟಾರ್ ಕ್ರಿಕೆಟಿಗನ ಪುತ್ರನ ಆರ್ಭಟ: ತಂದೆಯ ಎಸೆತದಲ್ಲಿ ಮಗನ ಸಿಕ್ಸ್​..!

VIDEO: ಅಫ್ಘಾನ್ ಸ್ಟಾರ್ ಕ್ರಿಕೆಟಿಗನ ಪುತ್ರನ ಆರ್ಭಟ: ತಂದೆಯ ಎಸೆತದಲ್ಲಿ ಮಗನ ಸಿಕ್ಸ್​..!

ಝಾಹಿರ್ ಯೂಸುಫ್
|

Updated on: Jul 23, 2025 | 11:54 AM

Share

Mohammed Nabi - Hassan Eisakhil: ಕಾಬೂಲ್​ನಲ್ಲಿ ನಡೆಯುತ್ತಿರುವ ಈ ಲೀಗ್​ನ 8ನೇ ಪಂದ್ಯದಲ್ಲಿ ಅಮೊ ಶಾರ್ಕ್ಸ್​ ಹಾಗೂ ಮಿಸ್ ಐನಾಕ್ಸ್ ನೈಟ್ಸ್ ತಂಡಗಳು ಮುಖಾಮುಖಿಯಾಗಿತ್ತು. ಮಿಸ್ ಐನಾಕ್ಸ್ ನೈಟ್ಸ್ ಪರ ಅಫ್ಘಾನಿಸ್ತಾನ್ ತಂಡದ ಸ್ಟಾರ್ ಆಲ್​ರೌಂಡರ್ ಮೊಹಮ್ಮದ್ ನಬಿ ಕಣಕ್ಕಿಳಿದರೆ, ಅಮೊ ಶಾರ್ಕ್ಸ್​ ಪರ ಅವರ ಪುತ್ರ ಹಸನ್ ಐಸಾಖಿಲ್ ಕಣಕ್ಕಿಳಿದಿದ್ದರು.

ಒಂದೇ ಪಂದ್ಯದಲ್ಲಿ ಸಹೋದರರು ಮುಖಾಮುಖಿಯಾಗಿರುವುದು ನೀವು ನೋಡಿರುತ್ತೀರಿ. ಆದರೆ ತಂದೆ-ಮಗನ ಮುಖಾಮುಖಿ ನೋಡಿದ್ದೀರಾ? ಅಂತಹದೊಂದು ಅಪರೂಪದ ಸನ್ನಿವೇಶಕ್ಕೆ ಅಫ್ಘಾನಿಸ್ತಾನದ ಶಪಗೀಝ ಕ್ರಿಕೆಟ್ ಲೀಗ್ ಸಾಕ್ಷಿಯಾಗಿದೆ. ಕಾಬೂಲ್​ನಲ್ಲಿ ನಡೆಯುತ್ತಿರುವ ಈ ಲೀಗ್​ನ 8ನೇ ಪಂದ್ಯದಲ್ಲಿ ಅಮೊ ಶಾರ್ಕ್ಸ್​ ಹಾಗೂ ಮಿಸ್ ಐನಾಕ್ಸ್ ನೈಟ್ಸ್ ತಂಡಗಳು ಮುಖಾಮುಖಿಯಾಗಿತ್ತು. ಮಿಸ್ ಐನಾಕ್ಸ್ ನೈಟ್ಸ್ ಪರ ಅಫ್ಘಾನಿಸ್ತಾನ್ ತಂಡದ ಸ್ಟಾರ್ ಆಲ್​ರೌಂಡರ್ ಮೊಹಮ್ಮದ್ ನಬಿ ಕಣಕ್ಕಿಳಿದರೆ, ಅಮೊ ಶಾರ್ಕ್ಸ್​ ಪರ ಅವರ ಪುತ್ರ ಹಸನ್ ಐಸಾಖಿಲ್ ಕಣಕ್ಕಿಳಿದಿದ್ದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಮೊ ಶಾರ್ಕ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಹಸನ್ ಐಸಾಖಿಲ್ ಅವರಿಗೆ 9ನೇ ಓವರ್​ನಲ್ಲಿ ತಂದೆ ಮೊಹಮ್ಮದ್ ನಬಿ ಎದುರಾಗಿದ್ದಾರೆ. ಅಲ್ಲದೆ  9ನೇ ಓವರ್​ನ ಮೊದಲ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ತಂದೆಯನ್ನು ಹಸನ್ ಸ್ವಾಗತಿಸಿದ್ದು ವಿಶೇಷವಾಗಿತ್ತು. ಅಲ್ಲದೆ ಈ ಪಂದ್ಯದಲ್ಲಿ 36 ಎಸೆತಗಳನ್ನು ಎದುರಿಸಿದ ಹಸನ್ ಐಸಾಖಿಲ್ 2 ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 52 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಅಮೊ ಶಾರ್ಕ್​ ತಂಡವು 19.4 ಓವರ್​ಗಳಲ್ಲಿ 162 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಮಿಸ್ ಐನಾಕ್ಸ್ ನೈಟ್ಸ್ ತಂಡದ ಪರ ಒಫಿಯುಲ್ಲಾ ಕೇವಲ 21 ಎಸೆತಗಳಲ್ಲಿ 49 ರನ್ ಬಾರಿಸಿದರು. ಹಾಗೆಯೇ ಖಾಲಿದ್ ತನಿವಾಲ್ 56 ರನ್​ ಸಿಡಿಸಿದರು. ಈ ಮೂಲಕ ಮಿಸ್ ಐನಾಕ್ಸ್ ನೈಟ್ಸ್ ತಂಡವು 17 ಓವರ್​ಗಳಲ್ಲಿ 168 ರನ್ ಬಾರಿಸಿ 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.