VIDEO: ಅಫ್ಘಾನ್ ಸ್ಟಾರ್ ಕ್ರಿಕೆಟಿಗನ ಪುತ್ರನ ಆರ್ಭಟ: ತಂದೆಯ ಎಸೆತದಲ್ಲಿ ಮಗನ ಸಿಕ್ಸ್..!
Mohammed Nabi - Hassan Eisakhil: ಕಾಬೂಲ್ನಲ್ಲಿ ನಡೆಯುತ್ತಿರುವ ಈ ಲೀಗ್ನ 8ನೇ ಪಂದ್ಯದಲ್ಲಿ ಅಮೊ ಶಾರ್ಕ್ಸ್ ಹಾಗೂ ಮಿಸ್ ಐನಾಕ್ಸ್ ನೈಟ್ಸ್ ತಂಡಗಳು ಮುಖಾಮುಖಿಯಾಗಿತ್ತು. ಮಿಸ್ ಐನಾಕ್ಸ್ ನೈಟ್ಸ್ ಪರ ಅಫ್ಘಾನಿಸ್ತಾನ್ ತಂಡದ ಸ್ಟಾರ್ ಆಲ್ರೌಂಡರ್ ಮೊಹಮ್ಮದ್ ನಬಿ ಕಣಕ್ಕಿಳಿದರೆ, ಅಮೊ ಶಾರ್ಕ್ಸ್ ಪರ ಅವರ ಪುತ್ರ ಹಸನ್ ಐಸಾಖಿಲ್ ಕಣಕ್ಕಿಳಿದಿದ್ದರು.
ಒಂದೇ ಪಂದ್ಯದಲ್ಲಿ ಸಹೋದರರು ಮುಖಾಮುಖಿಯಾಗಿರುವುದು ನೀವು ನೋಡಿರುತ್ತೀರಿ. ಆದರೆ ತಂದೆ-ಮಗನ ಮುಖಾಮುಖಿ ನೋಡಿದ್ದೀರಾ? ಅಂತಹದೊಂದು ಅಪರೂಪದ ಸನ್ನಿವೇಶಕ್ಕೆ ಅಫ್ಘಾನಿಸ್ತಾನದ ಶಪಗೀಝ ಕ್ರಿಕೆಟ್ ಲೀಗ್ ಸಾಕ್ಷಿಯಾಗಿದೆ. ಕಾಬೂಲ್ನಲ್ಲಿ ನಡೆಯುತ್ತಿರುವ ಈ ಲೀಗ್ನ 8ನೇ ಪಂದ್ಯದಲ್ಲಿ ಅಮೊ ಶಾರ್ಕ್ಸ್ ಹಾಗೂ ಮಿಸ್ ಐನಾಕ್ಸ್ ನೈಟ್ಸ್ ತಂಡಗಳು ಮುಖಾಮುಖಿಯಾಗಿತ್ತು. ಮಿಸ್ ಐನಾಕ್ಸ್ ನೈಟ್ಸ್ ಪರ ಅಫ್ಘಾನಿಸ್ತಾನ್ ತಂಡದ ಸ್ಟಾರ್ ಆಲ್ರೌಂಡರ್ ಮೊಹಮ್ಮದ್ ನಬಿ ಕಣಕ್ಕಿಳಿದರೆ, ಅಮೊ ಶಾರ್ಕ್ಸ್ ಪರ ಅವರ ಪುತ್ರ ಹಸನ್ ಐಸಾಖಿಲ್ ಕಣಕ್ಕಿಳಿದಿದ್ದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಮೊ ಶಾರ್ಕ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ಹಸನ್ ಐಸಾಖಿಲ್ ಅವರಿಗೆ 9ನೇ ಓವರ್ನಲ್ಲಿ ತಂದೆ ಮೊಹಮ್ಮದ್ ನಬಿ ಎದುರಾಗಿದ್ದಾರೆ. ಅಲ್ಲದೆ 9ನೇ ಓವರ್ನ ಮೊದಲ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ತಂದೆಯನ್ನು ಹಸನ್ ಸ್ವಾಗತಿಸಿದ್ದು ವಿಶೇಷವಾಗಿತ್ತು. ಅಲ್ಲದೆ ಈ ಪಂದ್ಯದಲ್ಲಿ 36 ಎಸೆತಗಳನ್ನು ಎದುರಿಸಿದ ಹಸನ್ ಐಸಾಖಿಲ್ 2 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 52 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ಅಮೊ ಶಾರ್ಕ್ ತಂಡವು 19.4 ಓವರ್ಗಳಲ್ಲಿ 162 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಮಿಸ್ ಐನಾಕ್ಸ್ ನೈಟ್ಸ್ ತಂಡದ ಪರ ಒಫಿಯುಲ್ಲಾ ಕೇವಲ 21 ಎಸೆತಗಳಲ್ಲಿ 49 ರನ್ ಬಾರಿಸಿದರು. ಹಾಗೆಯೇ ಖಾಲಿದ್ ತನಿವಾಲ್ 56 ರನ್ ಸಿಡಿಸಿದರು. ಈ ಮೂಲಕ ಮಿಸ್ ಐನಾಕ್ಸ್ ನೈಟ್ಸ್ ತಂಡವು 17 ಓವರ್ಗಳಲ್ಲಿ 168 ರನ್ ಬಾರಿಸಿ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.