ಮೊಹಮ್ಮದ್ ನಲಪಾಡ್ ಅಕಾಡೆಮಿಗೂ ತಾಕಿತು ಒತ್ತುವರಿ ತೆರವು ಕಾರ್ಯಾಚರಣೆಯ ಬಿಸಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿ ಮಂಗಳವಾರದಂದು ಅಕಾಡೆಮಿಯಿಂದ ಒತ್ತುವರಿ ಆಗಿದ್ದ ಸ್ಥಳವನ್ನು ತೆರವುಗೊಳಿಸಿದರು.
ಬೆಂಗಳೂರು: ಯುವ ಕಾಂಗ್ರೆಸ್ ನಾಯಕ ಮತ್ತು ಅದೇ ಪಕ್ಷದ ಶಾಸಕ ಎನ್ ಎ ಹ್ಯಾರಿಸ್ (NA Harris) ಅವರ ಮಗ ಮೊಹಮ್ಮದ್ ನಲಪಾಡ್ (Mohammad Nalapad) ಮಾಲೀಕತ್ವದಲ್ಲಿ ಬೆಂಗಳೂರಿನ ಚಲ್ಲಘಟ್ಟದಲ್ಲಿರುವ ನಲಪಾಡ್ ಅಕಾಡೆಮಿಗೂ (Nalapad Academy) ಒತ್ತುವರಿ ಬಿಸಿ ತಾಕಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿ ಮಂಗಳವಾರದಂದು ಅಕಾಡೆಮಿಯಿಂದ ಒತ್ತುವರಿ ಆಗಿದ್ದ ಸ್ಥಳವನ್ನು ತೆರವುಗೊಳಿಸಿದರು. ಬಿ ಬಿ ಎಮ್ ಪಿ ಸಿಬ್ಬಂದಿ ಮತ್ತು ಪೊಲೀಸ್ ತೆರವು ಕಾರ್ಯಾಚರಣೆಯ ನಂತರವೂ ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.