ದೇವನಹಳ್ಳಿ: ಚಾರ್ಜ್​ಗೆ ಇಟ್ಟಿದ್ದ ಐಫೋನ್​ನನ್ನು ಎಗರಿಸಿ ಮೊಬೈಲ್ ಟವರ್ ಏರಿದ ಮಂಗ, ಮುಂದೇನಾಯ್ತು?

Edited By: ಆಯೇಷಾ ಬಾನು

Updated on: Sep 23, 2024 | 1:58 PM

ಮಂಗನ ಕೈಯಲ್ಲಿ ಮಾಣಿಕ್ಯ ಸಿಕ್ಕರೆ ಹೇಗೆ ಅದು ಸತಾಯಿಸುತ್ತೋ ಅದೇ ರೀತಿ ಇಲ್ಲೊಂದು ಮಂಗ ಗ್ರಾಮಸ್ಥರಿಗೆ ತಲೆನೋವಾಗಿದೆ. ಮನೆಯಲ್ಲಿ ಚಾರ್ಜ್​ಗೆ ಇಟ್ಟಿದ್ದ ಐಫೋನ್​ನನ್ನು ಕದ್ದು ಮಂಗವೊಂದು ಮೊಬೈಲ್ ಟವರ್ ಏರಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮಸ್ಥರು ಸುಮಾರು ಗಂಟೆಗಳ ಕಾಲ ಕೋತಿ ಬಳಿ ನಿಂತು ಮೊಬೈಲ್​ ಪಡೆಯಲು ಹರಸಾಹಸಪಟ್ಟಿದ್ದು ಹಲವು ಗಂಟೆಗಳ ಬಳಿಕ ಕೋತಿ ಮೊಬೈಲ್ ಕೆಳಗೆ ಬಿಟ್ಟಿದೆ.

ದೇವನಹಳ್ಳಿ, ಸೆ.23: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಗ್ರಾಮದಲ್ಲಿ ಕೋತಿಗಳ ಕಾಟ ಮಿತಿಮೀರಿದೆ. ಮನೆಯಲ್ಲಿ ಚಾರ್ಜ್​ಗೆ ಇಟ್ಟಿದ್ದ ಐಫೋನ್​ನನ್ನು ಮಂಗ ಎಗರಿಸಿದ್ದು ಮೊಬೈಲ್ ಸಮೇತ ಟವರ್ ಏರಿದೆ. ಮಂಗನಿಂದ ಫೋನ್ ಪಡೆಯಲು ಹರಸಾಹಸಪಟ್ಟಿದ್ದಾರೆ. ಗ್ರಾಮದಲ್ಲಿ ನಿತ್ಯ ಮನೆಗಳ ಬಳಿಗೆ ಗುಂಪು ಗುಂಪಾಗಿ ಕೋತಿಗಳು‌ ಬರುತ್ತಿವೆ. ಮನೆಯಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನ ಹೊತ್ತೋಯ್ದು ಕ್ವಾಟ್ಲೆ ಕೊಡ್ತಿವೆ. ಅದೇ ರೀತಿ ಮನೆಯಲ್ಲಿದ್ದ ಐಫೋನ್ ಎತ್ತಿಕೊಂಡು ಕೋತಿ ಟವರ್ ಏರಿದ್ದು ಹಲವು ಗಂಟೆಗಳ ಬಳಿಕ ಗ್ರಾಮಸ್ಥರ ಹರಸಾಹಸದ ಬಳಿಕ ಟವರ್ ಮೇಲಿಂದ ಫೋನ್​ನನ್ನು ಕೆಳಗಡೆಗೆ ಬಿಸಾಕಿದೆ. ಮೇಲಿದ್ದ ಐಫೋನ್ ಬಿದ್ದ ಕಾರಣ ಡಿಸ್ಪ್ಲೇ ಡ್ಯಾಮೇಜ್ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published on: Sep 23, 2024 11:46 AM
Loading...
Unable to load recommendations.
Follow Us
ನವೀನ್ ಕುಮಾರ್ ಟಿ.

ನವೀನ್ ಕುಮಾರ್ ಟಿ ರವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಿವಾಸಿಯಾಗಿದ್ದು ಕಳೆದ 9 ವರ್ಷಗಳಿಂದ ಹೆಮ್ಮೆಯ ಟಿವಿ9 ಕನ್ನಡದ ದೇವನಹಳ್ಳಿ, ಬೆಂಗಳೂರು ಗ್ರಾಮಾತರ ಜಿಲ್ಲಾ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂಎಸ್​ಸಿ ಎಲೆಕ್ಟ್ರಾನಿಕ್ ಮೀಡಿಯಾ ವ್ಯಾಸಾಂಗ ಮಾಡಿರುವ ಇವರು ಪದವಿ ಶಿಕ್ಷಣ ಮುಗಿದ ನಂತರ ಟಿವಿ9 ಕನ್ನಡದಲ್ಲಿ ವರದಿಗಾರರಾಗಿ ಉದ್ಯೋಗಕ್ಕೆ ಸೇರಿದ್ದು ಆರು ತಿಂಗಳ ಕಾಲ ಮುಖ್ಯ ಕಛೇರಿಯಲ್ಲಿ ಕೆಲಸ ಮಾಡಿದ್ದಾರೆ. ಜೊತೆಗೆ ಸಂಸ್ಥೆ ನೀಡಿದ ಮಹತ್ವದ ವರದಿಗಾರನ ಹುದ್ದೆಯನ್ನು ಕಳೆದ 9 ವರ್ಷದಿಂದ ಸಿಲಿಕಾನ್ ಸಿಟಿ ಹೊರ ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ದೊಡ್ಡಬಳ್ಳಾಪುರ ಹೊಸಕೋಟೆ ಮತ್ತು ನಗರ ಜಿಲ್ಲೆಯ ಯಲಹಂಕ ಭಾಗದ ಸುದ್ದಿಗಳನ್ನ ವರದಿ ಮಾಡುತ್ತಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಮುಖವಾಗಿ ದೇಶದ ಟಾಪ್ 3 ನಲ್ಲಿ ಹೆಸರು ಪಡೆದು ಹೆಸರುವಾಸಿಯಾಗಿರುವ ಕೆಂಪೇಗೌಡ ಅಂತರಾಷ್ಟ್ರಿಯಾ ವಿಮಾನ ನಿಲ್ಥಾಣದ ಪ್ರಮುಖ ಸುದ್ದಿಗಳು ರಾಜಕೀಯ ಹಾಗೂ ಸಿಲಿಕಾನ್ ಸಿಟಿ ಹೊರ ವಲಯದಲ್ಲಿ ನಡೆಯುವ ಕ್ರೈಂ ಸೇರಿದಂತೆ ಇತರೆ ಸುದ್ದಿಗಳನ್ನ ವರದಿ ಮಾಡುತ್ತಾ ಎಕ್ಸಕ್ಲೂಸಿವ್ ವರದಿಗಳನ್ನ ನೀಡುತ್ತಿದ್ದಾರೆ.

Read More