ಮೋದಿ ಸಫಾರಿ ವೇಳೆ ಕೋತಿಯೊಂದು ನೀರಿಗಾಗಿ ಪರದಾಡಿದ ಮನಕಲಕುವ ದೃಶ್ಯ ಟಿವಿ9 ಕ್ಯಾಮರಾದಲ್ಲಿ ಸೆರೆ

Updated on: Apr 09, 2023 | 6:40 PM

ಬಂಡೀಪುರದಲ್ಲಿ ಟಿವಿ9 ಕ್ಯಾಮೆರಾಕ್ಕೆ ಕೋತಿ ಮರಿಯೊಂದು ಸೆರೆಸಿಕ್ಕಿದ್ದು, ಅದು ರಣಬಿಸಲಿಗೆ ದಾಹ ತೀರಿಸಿಕೊಳ್ಳಲು ಬಿಸಾಕಿದ್ದ ಬಾಟಲ್​ನಲ್ಲಿ ನೀರು ಕುಡಿಯಲು ಪರದಾಡಿದ ಮನಕಲಕುವ ದೃಶ್ಯ ಕಂಡುಬಂದಿದೆ.

ಚಾಮರಾಜನಗರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು(ಏಪ್ರಿಲ್​ 09) ಬಂಡಿಪುರ ರಾಷ್ಟ್ರೀಯ ಅಭಯಾರಣ್ಯಕ್ಕೆ ಭೇಟಿ ನೀಡಿದ್ದು, ಕಾಡಿನೊಳಗೆ ಸಫಾರಿ ಕೈಗೊಂಡು ಗಮನ ಸೆಳೆದಿದ್ದಾರೆ. ಖಾಕಿ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಹ್ಯಾಟ್, ಗಾಗಲ್ಸ್, ಟೀ ಶರ್ಟ್ ಹಾಗೂ ಅರಣ್ಯ ಇಲಾಖೆ ಜಾಕೆಟ್ ಧರಿಸಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯಕ್ಕೆ ಎಂಟ್ರಿ ಕೊಟ್ಟ ಮೋದಿ, ಸುಮಾರು 2 ಗಂಟೆ ಕಾಲ 20 ಕಿ.ಮೀ. ಸಫಾರಿ ಮಾಡಿದರು.

ಇದನ್ನೂ ಕೇಳಿ: Modi Safari: ಮೋದಿಯವರನ್ನ ಕಾಡಿನೊಳಗೆ ಸುತ್ತಾಡಿಸಿದ ಜೀಪ್​ ಡ್ರೈವರ್ ಹೇಳಿದ್ದೇನು ಗೊತ್ತಾ..?

ಈ ವೇಳೆ ಬಂಡೀಪುರದಲ್ಲಿ ಟಿವಿ9 ಕ್ಯಾಮೆರಾಕ್ಕೆ ಕೋತಿ ಮರಿಯೊಂದು ಸೆರೆಸಿಕ್ಕಿದ್ದು, ಅದು ರಣಬಿಸಲಿಗೆ ದಾಹ ತೀರಿಸಿಕೊಳ್ಳಲು ಬಿಸಾಕಿದ್ದ ಬಾಟಲ್​ನಲ್ಲಿ ನೀರು ಕುಡಿಯಲು ಪರದಾಡಿದ ಮನಕಲಕುವ ದೃಶ್ಯ ಕಂಡುಬಂದಿದೆ.

Published on: Apr 09, 2023 06:39 PM
Follow Us
Ramesh B Jawalagera

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More