Modi Safari: ಮೋದಿಯವರನ್ನ ಕಾಡಿನೊಳಗೆ ಸುತ್ತಾಡಿಸಿದ ಜೀಪ್ ಡ್ರೈವರ್ ಹೇಳಿದ್ದೇನು ಗೊತ್ತಾ..?
ಪ್ರಧಾನಿ ನರೇಂದ್ರ ಮೋದಿ ಅವರನ್ನು ತೆರೆದ ಜೀಪಿನಲ್ಲಿ ಬಂಡೀಪುರ ಅರಣ್ಯ ಪ್ರದೇಶವನ್ನು ತೋರಿಸಿದ ಚಾಲಕ ಮಧುಸೂದನ್ ಸಂತಸ ವ್ಯಕ್ತಪಡಿಸಿದ್ದಾರೆ.
‘ಪ್ರಾಜೆಕ್ಟ್ ಟೈಗರ್’ (Project Tiger) 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿ, ಒಂದೂವರೆ ಗಂಟೆ ಸಫಾರಿ ಮಾಡಿದರು. ಖಾಕಿ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಹ್ಯಾಟ್, ಗಾಗಲ್, ಟೀ ಶರ್ಟ್ ಹಾಗೂ ಅರಣ್ಯ ಇಲಾಖೆ ಜಾಕೆಟ್ ಧರಿಸಿ ಸುಮಾರು 20 ಕಿ.ಮೀ ಕಾಡಿನಲ್ಲಿ ಸುತ್ತಾಡಿದರು. ಬಂಡೀಪುರ ಅರಣ್ಯ ಇಲಾಖೆಯ ಚಾಲಕ ಮಧುಸೂದನ್ ಎನ್ನುವರು ಜೀಪ್ನಲ್ಲಿ ಮೋದಿಯವರನ್ನು ಕೂಡಿಸಿಕೊಂಡು ಕಾಡು ತೋರಿಸಿದರು.
ಇದನ್ನೂ ಓದಿ: ದುರ್ಬಿನ್ನಿಂದ ಹುಲಿ ಹುಡುಕಿದ ಮೋದಿ, ಸಫಾರಿ ವೇಳೆ ಪ್ರಧಾನಿಗೆ ಕಂಡ ಪ್ರಾಣಿಗಳಾವುವು? ಇಲ್ಲಿವೆ ಫೋಟೋಸ್
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರನ್ನು ತೆರೆದ ಜೀಪಿನಲ್ಲಿ ಬಂಡೀಪುರ ಅರಣ್ಯ ಪ್ರದೇಶವನ್ನು ತೋರಿಸಿದ ಚಾಲಕ ಮಧುಸೂದನ್ ಸಂತಸ ವ್ಯಕ್ತಪಡಿಸಿದ್ದಾರೆ. ಮೋದಿ ಸಫಾರಿ ಹೇಗಿತ್ತು? ಮೋದಿಅ ಅವರನ್ನು ಪಕ್ಕದಲ್ಲೇ ಕೂರಿಸಿಕೊಂಡು ಡ್ರೈವ್ ಮಾಡಿದ್ದಕ್ಕೆ ಏನು ಅನ್ನಿಸಿದೆ? ಎನ್ನುವುದನ್ನು ಚಾಲಕ ಮಧುಸೂದನ್ ಬಾಯಿಂದಲೇ ಕೇಳಿ.
Latest Videos