ಸಿಎಂ ಬಂದು ಎಲ್ಲರಿಗೂ ಒಂದೊಂದು ಲಕ್ಷ ಕೊಟ್ಟರು: ದಿ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮ
ತಮಿಳುನಾಡಿನ ಮುದುಮಲೈ ಅರಣ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದಾರೆ. ಈ ವೇಳೆ ತೆಪ್ಪಕಾಡು ಆನೆ ಶಿಬಿರದಲ್ಲಿ ದಿ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೆಳ್ಳಿ, ಬೊಮ್ಮ ದಂಪತಿ ಭೇಟಿಯಾಗಿ ಸನ್ಮಾನಿಸಿದರು.
ತಮಿಳುನಾಡಿನ ಮುದುಮಲೈ ಅರಣ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಭೇಟಿ ನೀಡಿದ್ದಾರೆ. ಈ ವೇಳೆ ತೆಪ್ಪಕಾಡು ಆನೆ ಶಿಬಿರದಲ್ಲಿ ದಿ ಎಲಿಫೆಂಟ್ ವಿಸ್ಪರರ್ಸ್ (The Elephant Whisperers) ಖ್ಯಾತಿಯ ಬೆಳ್ಳಿ, ಬೊಮ್ಮ ದಂಪತಿ ಭೇಟಿಯಾಗಿ ಸನ್ಮಾನಿಸಿದರು. ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಮದುಮಲೈನಲ್ಲಿ ಕಾವಾಡಿಗ ಬೊಮ್ಮಣ್ಣ, ಪ್ರಧಾನಿಯವರನ್ನ ನೋಡಿ ಮನಸ್ಸಿಗೆ ತುಂಬಾ ಖುಷಿ ತಂದಿದೆ. ನಮ್ಮನ್ನ ದೆಹಲಿಯ ನಿವಾಸಕ್ಕೆ ಬರಲು ತಿಳಿಸಿದ್ದಾರೆ. ನಾವು ಸಹ ಬರುತ್ತೇವೆ ಎಂದು ತಿಳಿಸಿದ್ದೇವೆ. ನಮ್ಮ ಕಾವಾಡಿಗರ ಕುರಿತು ಮೋದಿಯವರಿಗೆ ಇರೋ ಅಭಿಮಾನ ಕಂಡು ಸಂತಸ ಆಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿಯವರು ನಮ್ಮ ಬಳಿ ಬಂದಿರುವುದು ಅತ್ಯಂತ ಸಂತೋಷವಾಗಿದೆ. ಇದನ್ನು ನಾವು ಕನಸಿನಲ್ಲೂ ಯೋಚಿಸಿರಲಿಲ್ಲ. ಸಂತೋಷದಿಂದ ಕುಳಿತುಕೊಂಡು ಮಾತನಾಡಿದರು ಎಂದರು. ಅಲ್ಲದೆ, ಮುಖ್ಯಮಂತ್ರಿಯವರು ಎಲ್ಲಾ ಕಾವಾಡಿಗಳಿಗೆ ಒಂದೊಂದು ಲಕ್ಷ ಹಣ ಕೊಟ್ಟಿದ್ದಾರೆ ಎಂದರು.
ಇದನ್ನೂ ಓದಿ: ‘ಬೊಮ್ಮನ್-ಬೆಳ್ಳಿ ಮತ್ತು ರಾಘು ಜೊತೆ ಆಹಾ ಎಂಥ ಭೇಟಿ’; ಖುಷಿ ಹಂಚಿಕೊಂಡ ನರೇಂದ್ರ ಮೋದಿ
ಮತ್ತಷ್ಟು ವಿಡಿಯೋ ಸ್ಟೋರಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ