ತಮಿಳನಾಡು ತೆಪ್ಪಕಾಡು ಆನೆ ಶಿಬಿರಕ್ಕೆ ಪ್ರಧಾನಿ ಭೇಟಿ: ಕಬ್ಬು ತಿನ್ನಿಸಿ ಸಂತಸ ಪಟ್ಟ ಮೋದಿ
ಪ್ರಧಾನಿ ನರೇಂದ್ರ ಮೋದಿಯವರು ಮುದುಮಲೈ ಅರಣ್ಯ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿ ಬೆಳ್ಳಿ-ಬೊಮ್ಮ ದಂಪತಿಯನ್ನು ಸ್ಮಾನಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಮುದುಮಲೈ ಅರಣ್ಯ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿ ಬೆಳ್ಳಿ-ಬೊಮ್ಮ ದಂಪತಿಗೆ ಸನ್ಮಾನಿಸಿದರು. ಬೆಳ್ಳಿ-ಬೊಮ್ಮ ದಂಪತಿ, ದಿ ಎಲಿಫೆಂಟ್ ವಿಸ್ಪರರ್ಸ್ (The elephant whisperers) ಸಾಕ್ಷಚಿತ್ರದಲ್ಲಿ ನಟಿಸಿದ್ದರು. ಈ ಸಾಕ್ಷಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಈ ವೇಳೆ ಪ್ರಧಾನಿ ಮೋದಿ ಆನೆಗಳಿಗೆ ಕಬ್ಬು ತಿನ್ನಿಸಿ ಸಂತಸ ಪಟ್ಟರು, ಹಾಗೇ ಫೋಟೋ ಕ್ಲಿಕ್ಕಿಸಿಕೊಂಡರು.
Latest Videos