ಮೋದಿ ಸಫಾರಿ ವೇಳೆ ಕೋತಿಯೊಂದು ನೀರಿಗಾಗಿ ಪರದಾಡಿದ ಮನಕಲಕುವ ದೃಶ್ಯ ಟಿವಿ9 ಕ್ಯಾಮರಾದಲ್ಲಿ ಸೆರೆ
ಬಂಡೀಪುರದಲ್ಲಿ ಟಿವಿ9 ಕ್ಯಾಮೆರಾಕ್ಕೆ ಕೋತಿ ಮರಿಯೊಂದು ಸೆರೆಸಿಕ್ಕಿದ್ದು, ಅದು ರಣಬಿಸಲಿಗೆ ದಾಹ ತೀರಿಸಿಕೊಳ್ಳಲು ಬಿಸಾಕಿದ್ದ ಬಾಟಲ್ನಲ್ಲಿ ನೀರು ಕುಡಿಯಲು ಪರದಾಡಿದ ಮನಕಲಕುವ ದೃಶ್ಯ ಕಂಡುಬಂದಿದೆ.
ಚಾಮರಾಜನಗರ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು(ಏಪ್ರಿಲ್ 09) ಬಂಡಿಪುರ ರಾಷ್ಟ್ರೀಯ ಅಭಯಾರಣ್ಯಕ್ಕೆ ಭೇಟಿ ನೀಡಿದ್ದು, ಕಾಡಿನೊಳಗೆ ಸಫಾರಿ ಕೈಗೊಂಡು ಗಮನ ಸೆಳೆದಿದ್ದಾರೆ. ಖಾಕಿ ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಹ್ಯಾಟ್, ಗಾಗಲ್ಸ್, ಟೀ ಶರ್ಟ್ ಹಾಗೂ ಅರಣ್ಯ ಇಲಾಖೆ ಜಾಕೆಟ್ ಧರಿಸಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯಕ್ಕೆ ಎಂಟ್ರಿ ಕೊಟ್ಟ ಮೋದಿ, ಸುಮಾರು 2 ಗಂಟೆ ಕಾಲ 20 ಕಿ.ಮೀ. ಸಫಾರಿ ಮಾಡಿದರು.
ಇದನ್ನೂ ಕೇಳಿ: Modi Safari: ಮೋದಿಯವರನ್ನ ಕಾಡಿನೊಳಗೆ ಸುತ್ತಾಡಿಸಿದ ಜೀಪ್ ಡ್ರೈವರ್ ಹೇಳಿದ್ದೇನು ಗೊತ್ತಾ..?
ಈ ವೇಳೆ ಬಂಡೀಪುರದಲ್ಲಿ ಟಿವಿ9 ಕ್ಯಾಮೆರಾಕ್ಕೆ ಕೋತಿ ಮರಿಯೊಂದು ಸೆರೆಸಿಕ್ಕಿದ್ದು, ಅದು ರಣಬಿಸಲಿಗೆ ದಾಹ ತೀರಿಸಿಕೊಳ್ಳಲು ಬಿಸಾಕಿದ್ದ ಬಾಟಲ್ನಲ್ಲಿ ನೀರು ಕುಡಿಯಲು ಪರದಾಡಿದ ಮನಕಲಕುವ ದೃಶ್ಯ ಕಂಡುಬಂದಿದೆ.
Published on: Apr 09, 2023 06:39 PM
Latest Videos