ದೊಡ್ಡಬಳ್ಳಾಪುರದಲ್ಲೊಂದು ನೈತಿಕ ಪೊಲೀಸ್ ಗಿರಿ, ಅನ್ಯಕೋಮಿನ ಯುವತಿ ಮತ್ತು ಹಿಂದೂ ಯುವಕನ ಮೇಲೆ ಹಲ್ಲೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 29, 2022 | 5:36 PM

ಹಿಂದೂ ಧರ್ಮದ ಯುವಕನೊಬ್ಬನೊಂದಿಗೆ ಬೇರೆ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಹುಜೂರ್ ಮತ್ತವನ ಸಂಗಡಿಗರು ಯುವತಿಯನ್ನು ಹೆದರಿಸಿ ಅವರಿಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನೈತಿಕ ಪೊಲೀಸ್ ಗಿರಿಯ ಪ್ರಕರಣವೊಂದು ಸೆಪ್ಟೆಂಬರ್ 25 ರಂದು ದಾಖಲಾಗಿದೆ. ಹಿಂದೂ ಧರ್ಮದ ಯುವಕನೊಬ್ಬನೊಂದಿಗೆ ಬೇರೆ ಸಮುದಾಯಕ್ಕೆ ಸೇರಿದ ಯುವತಿಯೊಬ್ಬಳು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಇಸ್ಲಾಂಪುರದ ನಿವಾಸಿ ಹುಜೂರ್ ಮತ್ತವನ ಸಂಗಡಿಗರು ಸೇರಿ ಯುವತಿಯನ್ನು ಹೆದರಿಸಿ ಅವಳ ಮತ್ತು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ದೊಡ್ಡಬಳ್ಳಾಪುರದ ತೇರಿನ ಬೀದಿಯಲ್ಲಿ ಗಲಾಟೆ ನಡೆದಿದ್ದು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.