ಮೊಟೊ ಜಿ71 5ಜಿ ಸ್ಮಾರ್ಟ್ಫೋನ್ ರವಿವಾರ ಲಾಂಚ್ ಆಗಲಿದ್ದು ಅದರ ಬೆಲೆ ಆಗಲೇ ಬಹಿರಂಗಗೊಂಡಿದೆ!
ಭಾರತೀಯ ಉಪಖಂಡದಲ್ಲಿ ಮೊಟೊ ಜಿ71 5ಜಿ ಸ್ಮಾರ್ಟ್ಫೋನ್ ರೂ.18,999 ಗಳಿಗೆ ಸಿಗಲಿದೆ ಎಂಬ ಮಾಹಿತಿಯನ್ನು ಟಿಪ್ಸ್ಟರ್ ಲೀಕ್ ಮಾಡಿದ್ದಾರೆ. ಅದರರ್ಥ, ಜಿ71 5ಜಿ ಸ್ಮಾರ್ಟ್ಫೋನ್ ಜಿ51 5ಜಿ ಗಿಂತ ರೂ. 4,000 ದುಬಾರಿಯಾಗಲಿದೆ.
ಕೆಲ ವಾರಗಳ ಹಿಂದೆ ನಾವು ಮೊಟೊ ಜಿ71 5ಜಿ ಸ್ಮಾರ್ಟ್ಫೋನ್ ಭಾರತದಲ್ಲಿ 2022 ರ ಜನೆವರಿಯಲ್ಲಿ ಲಾಂಚ್ ಅಗಲಿದೆ ಎಂದು ಹೇಳಿದ್ದು ನಿಮಗೆ ಹೇಳಿದ್ದು ನೆನೆಪಿರಬಹುದು. ಆ ದಿನ ಬಂದುಬಿಟ್ಟಿದೆ. ಹೌದು, ಇಂದೇ ಆಂದರೆ ರವಿವಾರ ಜನೆವರಿ 10ರಂದು ಈ ಫೋನ್ ನಮ್ಮ ದೇಶದಲ್ಲಿ ಲಾಂಚ್ ಆಗುತ್ತಿದೆ ಮಾರಾಯ್ರೇ. ಮೊಟೊರೊಲ ಕಂಪನಿಯು ಒಂದು ಅಧಿಕೃತ ಪ್ರಕಟಣೆಯ ಮೂಲಕ ಈ ಮಾಹಿತಿಯನ್ನು ಖಚಿತಪಡಿಸಿದೆ. ಮೊಟೊರೊಲ ಕಂಪನಿಯ ಜಿ31 5ಜಿ ಮತ್ತು ಜ31 ಮಾಡೆಲ್ಗಳು ಈಗಾಗಲೇ ಭಾತದಲ್ಲಿ ಲಭ್ಯವಿದ್ದು ಜಿ71 5ಜಿ ಸ್ಮಾರ್ಟ್ಫೋನ್ ಅವುಗಳ ಜೊತೆ ಸೇರಲಿದೆ. ಸೋಜಿಗದ ಸಂಗತಿಯೇನೆಂದರೆ, ಪೋನ್ ಲಾಂಚ್ ಆಗುವ ಮೊದಲೇ ಒಬ್ಬ ಟಿಪ್ಸ್ಟರ್ ಕೃಪೆಯ ಮೂಲಕ ನಮಗೆ ಅದರ ಬೆಲೆ ಗೊತ್ತಾಗಿಬಿಟ್ಟಿದೆ.
ಭಾರತೀಯ ಉಪಖಂಡದಲ್ಲಿ ಮೊಟೊ ಜಿ71 5ಜಿ ಸ್ಮಾರ್ಟ್ಫೋನ್ ರೂ.18,999 ಗಳಿಗೆ ಸಿಗಲಿದೆ ಎಂಬ ಮಾಹಿತಿಯನ್ನು ಟಿಪ್ಸ್ಟರ್ ಲೀಕ್ ಮಾಡಿದ್ದಾರೆ. ಅದರರ್ಥ, ಜಿ71 5ಜಿ ಸ್ಮಾರ್ಟ್ಫೋನ್ ಜಿ51 5ಜಿ ಗಿಂತ ರೂ. 4,000 ದುಬಾರಿಯಾಗಲಿದೆ.
ಮೊಟೊ ಜಿ71 5ಜಿ ಫೋನ್ 6.4-ಇಂಚಿನ 1080×2400 ಅಮೊಲೆಡ್ ಪ್ಯಾನೆಲ್ ಹೊಂದಿದ್ದು ಅದಕ್ಕೆ ಹೆಚ್ಚಿನ ರಿಫ್ರೆಶ್ ದರವಿಲ್ಲ. ಸ್ನಾಪ್‌ಡ್ರಾಗನ್ 695 5ಜಿ ಚಿಪ್‌ಸೆಟ್ (ಇದು ವಾಸ್ತವವಾಗಿ ಈ ಎಸ್ಓಸಿ ನೊಂದಿಗೆ ಭಾರತದ ಮೊದಲ ಸ್ಮಾರ್ಟ್‌ಫೋನ್ ಆಗಿರುತ್ತದೆ).
6ಜಿಬಿ ಱಮ್ (2ಜಿಬಿ “ಱಮ್ ಬೂಸ್ಟ್” ಜೊತೆಗೆ), 128ಜಿಬಿ ಸ್ಟೋರೇಜ್, ಟ್ರಿಪಲ್ ಹಿಂಬದಿಯ ಕ್ಯಾಮೆರಾ ವ್ಯವಸ್ಥೆ (50 ಮೆಗಾಪಿಕ್ಸೆಲ್ ಮುಖ್ಯ, 8 ಎಮ್ಪಿ ಅಲ್ಟ್ರಾವೈಡ್, 2 ಎಮ್ಪಿ ಮ್ಯಾಕ್ರೋ), 16 ಎಮ್ಪಿ ಸೆಲ್ಫೀ ಶೂಟರ್, ಮತ್ತು 30ಡಬ್ಲ್ಯೂ ವೇಗದ ಚಾರ್ಜಿಂಗ್‌ನೊಂದಿಗೆ 5,000 ಎಮ್ ಎ ಎಚ್ ಬ್ಯಾಟರಿ ಮೊದಲಾದವುಗಳನ್ನು ಹೊಂದಿದೆ. ಈ ಫೋನ್ ಆ್ಯಂಡ್ರಾಯ್ಡ್ 11ರೊಂದಿಗೆ ರನ್ ಅಗುತ್ತದೆ.