ಬೆಂಗಳೂರಿನ ಕೆ ಆರ್ ಮಾರ್ಕೆಟ್ ಬಳಿ ಕಟ್ಟುನಿಟ್ಟಾಗಿ ಲಾಕ್​​​ಡೌನ್​ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸಿದರು ಪೊಲೀಸರು

ಕೇವಲ ತುರ್ತು ಸಂದರ್ಭ ಇದ್ದರೆ ಮತ್ತು ಅಗತ್ಯ ಸೇವೆಗಳ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಮಾತ್ರ ಓಡಾಡುವ ಅವಕಾಶವಿದೆ ಅಂತ ಲಾಕ್ಡೌನ್ ನಿಯಮ ಉಲ್ಲಂಘಿಸಿ ತಮ್ಮ ವಾಹನಗಳನ್ನು ತೆಗೆದುಕೊಂಡು ಹೊರಬಂದಿದ್ದವರಿಗೆ ನಯವಾಗೇ ತಿಳಿ ಹೇಳಿದ ಪೊಲೀಸರು ಅವರ ವಾಹನಗಳನ್ನು ಜಪ್ತಿ ಮಾಡಿದರು.

TV9kannada Web Team

| Edited By: Arun Belly

Jan 08, 2022 | 11:07 PM

ಬೆಂಗಳೂರಿನ ಕೆ ಆರ್ ಮಾರ್ಕೆಟ್ ಪ್ರದೇಶದಲ್ಲಿ ಶನಿವಾರ ಕಟ್ಟುನಿಟ್ಟಾಗಿ ಲಾಕ್ಡೌನ್ ನಿಯಮಗಳನ್ನು ಜಾರಿಗೊಳಿಸಲಾಯಿತು. ಲಾಕ್ಡೌನ್ ಕುರಿತು ಸರ್ಕಾರ ಎರಡು ಮೂರು ದಿನಗಳಿಂದ ಘೋಷಣೆ ಮಾಡುತ್ತಿದ್ದರೂ ಜನ ಅನಗತ್ಯವಾಗಿ, ಅನಾವಶ್ಯಕವಾಗಿ ಮಾರ್ಕೆಟ್ ಬಳಿಯ ರಸ್ತೆಗಳಿಗೆ ಬಂದರು. ಏನೇ ಕಾರಣ ಹೇಳಿದರೂ ನೆಪಗಳನ್ನು ಪೋಣಿಸಿದರೂ ಪೊಲೀಸರು ಕೇಳಲಿಲ್ಲ. ಕೇವಲ ತುರ್ತು ಸಂದರ್ಭ ಇದ್ದರೆ ಮತ್ತು ಅಗತ್ಯ ಸೇವೆಗಳ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಮಾತ್ರ ಓಡಾಡುವ ಅವಕಾಶವಿದೆ ಅಂತ ಲಾಕ್ಡೌನ್ ನಿಯಮ ಉಲ್ಲಂಘಿಸಿ ತಮ್ಮ ವಾಹನಗಳನ್ನು ತೆಗೆದುಕೊಂಡು ಹೊರಬಂದಿದ್ದವರಿಗೆ ನಯವಾಗೇ ತಿಳಿ ಹೇಳಿದ ಪೊಲೀಸರು ಅವರ ವಾಹನಗಳನ್ನು ಜಪ್ತಿ ಮಾಡಿದರು.

ಆದರೆ, ಜನ ವಾದ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ. ಕೆಲವರಂತೂ ಪೊಲೀಸರ ತಾಳ್ಮೆ ಕಳೆದುಕೊಳ್ಳುವವರಗೆ ವಾದಿಸಿದರು. ಅಂಥವರಿಗೆ ಆರಕ್ಷಕರು ಒರಟು ಭಾಷೆ ಪ್ರಯೋಗಿಸುವುದು ಅನಿವಾರ್ಯವಾಗಿತ್ತು.

ಯಾಕೆ ಹೊರಬಂದಿದ್ದು ಅಂತ ಕೇಳಿದಾಗ ಜನ ನೀಡಿದ ಉತ್ತರಗಳು ಮಜವಾಗಿದ್ದವು. ಒಬ್ಬರು ಕೊತ್ತಂಬರಿ ಸೊಪ್ಪು ತೆಗೆದುಕೊಳ್ಳಲು ಬಂದಿದ್ದಾಗಿ ಹೇಳಿದರು. ಮತ್ತೊಬ್ಬರು ಆಸ್ಪತ್ರೆಗೆ ಹೋಗಬೇಕಿತ್ತು ಅಂತ ಹೇಳಿದರು. ಯಾಕೆ, ಏನು ಕಾಯಿಲೆ ಅಂದರೆ ಉತ್ತರವಿಲ್ಲ.

ಈ ವಿಡಿಯೋದ ಅಂತಿಮ ಭಾಗದಲ್ಲಿ ಹಿರಿಯ ನಾಗರಿಕರು ಹೇಳುತ್ತಿರುವುದನ್ನು ಕೇಳಿಸಿಕೊಳ್ಳಿ. ಪೊಲೀಸರು ವಾಹನವನ್ನು ಜಪ್ತಿ ಮಾಡಿದಾಗ ಅವರು ತಮ್ಮ ಚೀಲದಲ್ಲಿರುವುದನ್ನು ತೋರಿಸಿ ಇದನ್ನು ಮನೆಯಲ್ಲಿ ಕೊಟ್ಟು ಬರ್ತೀನಿ ಆಮೇಲೆ ಸ್ಕೂಟರ್ ಸೀಜ್ ಮಾಡಿ ಎಂದು ಅವರು ಹೇಳುತ್ತಿದ್ದಾರೆ.

ಇದನ್ನೂ ಓದಿ:  ಬಾಯಿ ಮುಚ್ಚಿಕೊಳ್ಳಿ, ಅಧಿಕ ಪ್ರಸಂಗ ಮಾಡಬೇಡ; ಮೈಸೂರಿನಲ್ಲಿ ಚೆಸ್ಕಾಂ ಅಧಿಕಾರಿ ವಿರುದ್ಧ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಗರಂ! ವಿಡಿಯೋ ಇದೆ

Follow us on

Click on your DTH Provider to Add TV9 Kannada