ಕಾಂಗ್ರೆಸ್ ನಾಯಕರನ್ನು ಉಗ್ರವಾಗಿ ಟೀಕಿಸುತ್ತಿದ್ದ ಎಂಪಿ ರೇಣುಕಾಚಾರ್ಯ ಇಂದು ಡಿಕೆ ಶಿವಕುಮಾರ್​ರನ್ನು ಭೇಟಿಯಾದರು!

Updated on: Aug 25, 2023 | 5:53 PM

ಕನ್ನಡಿಗರಲ್ಲಿ ಅಚ್ಚರಿ ಹುಟ್ಟಿಸುತ್ತಿರುವ ಸಂಗತಿಯೆಂದರೆ, ಬಿಜೆಪಿ ನಾಯಕರು ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗುತ್ತಿರೋದು. ಕಳೆದ 3-4 ದಿನಗಳಿಂದ ಎಸ್ ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುತ್ತಿದ್ದರೆ ಇವತ್ತು ರೇಣುಕಾಚಾರ್ಯ ಸರದಿ!

ಬೆಂಗಳೂರು: ಸಣ್ಣಪುಟ್ಟ ವಿದ್ಯಮಾನಗಳಿಗೂ ವಿಪರೀತ ಅರ್ಥ ಕಲ್ಪಿಸುವ ಜಾಯಮಾನ ನಮ್ಮದು. ಏನು ಮಾಡೋದೆ ಮಾರಾಯ್ರೇ ರಾಜ್ಯದ ರಾಜಕೀಯ ವಿದ್ಯಮಾನಗಳೇ ಹಾಗಿವೆ. ಕೆಲ ಬಿಜೆಪಿ ನಾಯಕರಿಗೆ ಅದೇನಾಗುತ್ತಿದೆಯೋ ಗೊತ್ತಿಲ್ಲ. ಇವತ್ತು ಮಾಜಿ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ (MP Renukacharya) ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ರನ್ನು (DK Shivakumar) ಅವರ ನಗರದ ಸದಾಶಿವನಗರದ ಮನೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಕೆಂಪು ಶರ್ಟ್ ತೊಟ್ಟು ಶಿವಕುಮಾರ್ ನಿವಾಸಕ್ಕೆ ಆಗಮಿಸಿದ ರೇಣುಕಾಚಾರ್ಯ ಅವರ ಕೈಯಲ್ಲಿ ಒಂದಷ್ಟು ಕಾಗದಗಳಿದ್ದವು. ಮನೆಯಲ್ಲಿ ಶಿವಕುಮಾರ್ ಜೊತೆ ಮಾತಾಡುವಾಗಲೂ ಸುರುಳಿ ಸುತ್ತಿದ್ದ ಆ ಪೇಪರ್ ಗಳು ಅವರ ಕೈಯಲ್ಲೇ ಇದ್ದವು. ಅವರ ನಡುವೆ ನಡೆದ ಮಾತುಕತೆಯ ವಿವರ ನಮಗೆ ಗೊತ್ತಿಲ್ಲ. ಕನ್ನಡಿಗರಲ್ಲಿ ಅಚ್ಚರಿ ಹುಟ್ಟಿಸುತ್ತಿರುವ ಸಂಗತಿಯೆಂದರೆ, ಬಿಜೆಪಿ ನಾಯಕರು ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು (CM Siddaramaiah) ಭೇಟಿಯಾಗುತ್ತಿರೋದು. ಕಳೆದ 3-4 ದಿನಗಳಿಂದ ಎಸ್ ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ಕಾಂಗ್ರೆಸ್ ನಾಯಕರನ್ನು ಭೇಟಿಯಾಗುತ್ತಿದ್ದರೆ ಇವತ್ತು ರೇಣುಕಾಚಾರ್ಯ ಸರದಿ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More