‘ಅಯ್ಯಯ್ಯೋ ಮುಟ್ಟಬಾರದು’; ಅರ್ಜುನ್​ ಜನ್ಯರನ್ನು ಆಕಾಂಕ್ಷಾ ಟಚ್​ ಮಾಡಿದ್ದಕ್ಕೆ ಅನುಶ್ರೀ ರಿಯಾಕ್ಷನ್​

| Updated By: ಮದನ್​ ಕುಮಾರ್​

Updated on: Jun 20, 2022 | 7:30 AM

Arjun Janya | Anchor Anushree: ಇಂಥದ್ದೊಂದು ಪ್ರಸಂಗ ನಡೆದಿದ್ದು ‘ತ್ರಿವಿಕ್ರಮ’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ನಲ್ಲಿ. ಅರ್ಜುನ್ ಜನ್ಯ ಅವರನ್ನು ನಟಿ ಆಕಾಂಕ್ಷಾ ಟಚ್​ ಮಾಡಿದಾಗ ಅನುಶ್ರೀ ಪ್ರತಿಕ್ರಿಯೆ ಹೀಗಿತ್ತು.

ಕಿರುತೆರೆ ಕಾರ್ಯಕ್ರಮದ ವೇದಿಕೆಗಳಲ್ಲಿ ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ಮತ್ತು ನಿರೂಪಕಿ ಅನುಶ್ರೀ (Anchor Anushree) ಅವರು ಪರಸ್ಪರ ಕಾಲೆಳೆದುಕೊಳ್ಳುವುದು ಜನರಿಗೆ ಸಖತ್​ ಮನರಂಜನೆ ನೀಡುತ್ತದೆ. ಭಾನುವಾರ (ಜೂನ್​ 19) ಅದ್ದೂರಿಯಾಗಿ ನಡೆದ ‘ತ್ರಿವಿಕ್ರಮ’ (Trivikrama Movie) ಸಿನಿಮಾದ ಪ್ರೀ-ರಿಲೀಸ್​ ಕಾರ್ಯಕ್ರಮದಲ್ಲೂ ಅಂಥ ಪ್ರಸಂಗ ಮರುಕಳಿಸಿತು. ರವಿಚಂದ್ರನ್​ ಎರಡನೇ ಪುತ್ರ ವಿಕ್ರಮ್​ ರವಿಚಂದ್ರನ್​ ಅವರು ಈ ಸಿನಿಮಾಗೆ ಹೀರೋ. ಅವರಿಗೆ ಜೋಡಿಯಾಗಿ ಆಕಾಂಕ್ಷಾ ನಟಿಸಿದ್ದಾರೆ. ವೇದಿಕೆಯಲ್ಲಿ ಪಕ್ಕಕ್ಕೆ ಸರಿದುಕೊಳ್ಳುವಾಗ ಆಕಾಂಕ್ಷಾ ಅವರು ಅರ್ಜುನ್​ ಜನ್ಯರ (Arjun Janya) ಮೈ ಮೇಲೆ ಕೈ ಹಾಕಿದರು. ಅದನ್ನು ತಕ್ಷಣ ಗಮನಿಸಿದ ಅನುಶ್ರೀ ಅವರು ‘ಅಯ್ಯಯ್ಯೋ ಮುಟ್ಟಬಾರದು..’ ಎಂದು ಹೇಳಿದ್ದು ಫನ್ನಿ ಆಗಿತ್ತು. ವೇದಿಕೆಯಲ್ಲಿ ನಡೆದ ಆ ತಮಾಷೆಯ ಕ್ಷಣಗಳು ಈ ವಿಡಿಯೋದಲ್ಲಿವೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.