PM Narendra Modi In Bengaluru: ಮೋದಿಯವರನ್ನು ನೋಡಲು ಬಂದವರಲ್ಲಿ ಮುಸ್ಲಿಂ ಸಮುದಾಯ ಸದಸ್ಯರ ಪಾಲು ದೊಡ್ಡದು
ಪ್ರಧಾನಿ ಮೋದಿ ದೇವನಹಳ್ಳಿಗೆ ಆಗಮಿಸುವ ಮೊದಲು ನೂರಾರು ಮುಸಲ್ಮಾನರು ಬಸ್ ಗಳಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವುದನ್ನು ನೋಡಬಹುದು.
ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ದೇವನಹಳ್ಳಿಯಲ್ಲಿರುವ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ (KIA) ಟರ್ಮಿನಲ್ ಉದ್ಘಾಟಿಸಿದ್ದನ್ನು ಮತ್ತು ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿದ ವಿಡಿಯೋಗಳನ್ನು ನಿಮಗೆ ತೋರಿಸಿದ್ದೇವೆ. ವಿಮಾನ ನಿಲ್ದಾಣದ ಬಳಿ ಪ್ರಧಾನಿಗಳನ್ನು ನೋಡಲು ಭಾರಿ ಜನಸ್ತೋಮ ನೆರೆದಿತ್ತು. ಗಮನಿಸಬೇಕಾದ ಸಂಗತಿಯೇನೆಂದರೆ ಮುಸ್ಲಿಂ ಸಮುದಾಯದವರು (Muslim community) ಸಹ ಬಹು ದೊಡ್ಡ ಸಂಖ್ಯೆಯಲ್ಲಿ ಪ್ರಧಾನಿಗಳನ್ನು ನೋಡಲು ಆಗಮಿಸಿದ್ದು. ಪ್ರಧಾನಿ ಮೋದಿ ದೇವನಹಳ್ಳಿಗೆ ಆಗಮಿಸುವ ಮೊದಲು ನೂರಾರು ಮುಸಲ್ಮಾನರು ಬಸ್ ಗಳಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.