ಹಿಂದೂ ದೇಗುಲ ಪುನರ್ ನಿರ್ಮಾಣಕ್ಕೆ ಕೋಟಿ ಕೋಟಿ ಹಣಕೊಟ್ಟ ಮುಸ್ಲಿಂ ಉದ್ಯಮಿ
ಹಿಂದೂ ದೇಗುಲದ ಪುನರ್ ನಿರ್ಮಾಣಕ್ಕೆ ಕೋಟಿ ಕೋಟಿ ಹಣ ನೀಡುವ ಮೂಲಕ ಚನ್ನಪಟ್ಟಣದಲ್ಲಿ ಮುಸ್ಲಿಂ ಉದ್ಯಮಿಯೊಬ್ಬರು ಸಾಮರಸ್ಯ ಮೆರೆದಿದ್ದಾರೆ. ದೇಗುಲದ ಉದ್ಘಾಟನೆ ಹಿನ್ನಲೆ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಅವರು ಭಾಗಿಯಾಗಿದ್ದು, ಕೃತಜ್ಞತಾಪೂರ್ವಕವಾಗಿ ಹಿಂದೂ ಸಮಾಜ ಅವರನ್ನು ಸನ್ಮಾನಿಸಿದೆ. ಜೈಕಾರ ಕೂಗಿ ಅಭಿನಂದನೆ ಸಲ್ಲಿಸಿದೆ.
ರಾಮನಗರ, ನವೆಂಬರ್ 04: ಧರ್ಮ ಕಲಹಳಗ ನಡುವೆ ಬೊಂಬೆನಗರಿ ಚನ್ನಪಟ್ಟಣದಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾದ ಪ್ರಸಂಗವೊಂದು ನಡೆದಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿದ್ದ ಪುರಾತನ ದೇಗುಲದ ಪುನರ್ ನಿರ್ಮಾಣಕ್ಕೆ 3 ಕೋಟಿ ಹಣವನ್ನ ಮುಸ್ಲಿಂ ಉದ್ಯಮಿಯೊಬ್ಬರು ನೀಡಿದ್ದು, ನೂತನ ದೇಗುಲದ ಉದ್ಘಾಟನೆ ಹಿನ್ನಲೆ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಭಾಗಿಯಾಗುವ ಮೂಲಕ ಮಾದರಿಯಾಗಿದ್ದಾರೆ. ಚನ್ನಪಟ್ಟಣದ ಮಂಗಳವಾರಪೇಟೆಯಲ್ಲಿರುವ ಬಸವೇಶ್ವರ ಸ್ವಾಮಿಯ ದೇಗುಲ ಸಂಪೂರ್ಣ ಶಿಥಿಲಗೊಂಡಿತ್ತು. ಈ ಹಿನ್ನಲೆ ದೇಗುಲದ ನೂತನ ಕಟ್ಟಡವನ್ನ ತಮ್ಮದೇ ಸಂಪೂರ್ಣ ಖರ್ಚಿನಲ್ಲಿ ಚನ್ನಪಟ್ಟಣದ ಮುಸ್ಲಿಂ ಮುಖಂಡ, ಎಸ್. ಕೆ. ಬೀಡಿ ಮಾಲೀಕ ಸೈಯದ್ ಸದಾತ್ ವುಲ್ಲಾ ಸಖಾಫ್ ನಿರ್ಮಿಸಿಕೊಟ್ಟಿದ್ದಾರೆ. ಸೈಯದ್ ಸದಾತ್ ವುಲ್ಲಾ ಸಖಾಫ್ ಅವರನ್ನು ಹಿಂದೂ ಸಮಾಜ ಸನ್ಮಾನಿಸಿದ್ದು, ಬೆಳ್ಳಿ ಕಿರೀಟ ತೊಡಿಸಿ, ಹೂವಿನ ಮಳೆ ಸುರಿಸಿ ಜೈಕಾರ ಹಾಕಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Nov 04, 2025 02:17 PM
