ಹಾವೇರಿ: ಬಕ್ರೀದ್ ಆಚರಣೆ ವೇಳೆ ಬಡಿದಾಡಿಕೊಂಡ ಮುಸ್ಲಿಂ ಯುವಕರು, ಓರ್ವ ಆಸ್ಪತ್ರೆಗೆ ದಾಖಲು

| Updated By: Rakesh Nayak Manchi

Updated on: Jun 29, 2023 | 11:56 AM

Haveri News: ಬಕ್ರೀದ್ ಹಬ್ಬದ ಪ್ರಯುಕ್ತ ಈದ್ಗಾ ಮೈದಾನದಲ್ಲಿ ನಡೆದ ಆಚರಣೆಯ ನಂತರ ಮುಸ್ಲಿಂ ಯುವಕರು ಬಡಿದಾಡಿಕೊಂಡ ಘಟನೆ ನಡೆದಿದೆ.

ಹಾವೇರಿ: ಬಕ್ರೀದ್ (Bakrid) ಹಬ್ಬದ ಪ್ರಯುಕ್ತ ಈದ್ಗಾ ಮೈದಾನದಲ್ಲಿ (Idgah Maidan) ನಡೆದ ಆಚರಣೆಯ ನಂತರ ಅಂಜುಮನ್ ಕಮಿಟಿ ಲೆಕ್ಕಪತ್ರ ನಿರ್ವಹಣೆ ವಿಚಾರವಾಗಿ ಮುಸ್ಲಿಂ ಯುವಕರು ಬಡಿದಾಡಿಕೊಂಡ ಘಟನೆ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದಲ್ಲಿ ನಡೆದಿದೆ. ಈದ್ಗಾ ಮೈದಾನದ ನಿರ್ವಹಣೆಗಾಗಿ ವಂತಿಕೆ ಸಂಗ್ರಹ ವೇಳೆ ಯುವಕರ ನಡುವೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿಕೊಂಡಿದ್ದಾರೆ. ಘಟನೆಯಲ್ಲಿ ಮುಸ್ತಕಾಅಹ್ಮದ್ ಖಾಜಿ ಎಂಬವನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿರಾರು ಜನರು ಸೇರಿ ಸಾಮೂಹಿಕ ಪ್ರಾರ್ಥನೆ ನಡೆಸಿದ ನಂತರ ಈ ಗಲಾಟೆ ನಡೆದಿದೆ. ಸ್ಥಳಕ್ಕೆ ರಟ್ಟಿಹಳ್ಳಿ ಪೊಲೀಸರು ಆಗಮಿಸಿದ ಬಳಿಕ ಪರಿಸ್ಥಿತಿ ಶಾಂತವಾಗಿದೆ.

ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published On - 11:56 am, Thu, 29 June 23

Follow us on