ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ

Edited By:

Updated on: Dec 23, 2025 | 8:07 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ರಜತ್ ಸಂಭಾವನೆ ಕಡಿಮೆ ಇತ್ತಂತೆ. ಆದರೆ, ನಂತರ ಅವರು ಅದ್ಭುತವಾಗಿ ಆಟ ಆಡಿದರು. ಆ ಬಳಿಕ ಅವರ ಸಂಭಾವನೆ ಜಾಸ್ತಿ ಆಯಿತು ಎಂದರೆ ನೀವು ನಂಬಲೇಬೇಕು. ಈ ಬಗ್ಗೆ ಅವರು ಟಿವಿ9 ಕನ್ನಡ ಜೊತೆಗೆ ಮಾತನಾಡಿದ್ದಾರೆ ಎಂಬುದು ವಿಶೇಷ. ಆ ಬಗ್ಗೆ ಇಲ್ಲಿದೆ ವಿವರ.

ರಜತ್ ಅವರು ಬಿಗ್ ಬಾಸ್​​ 11ನೇ ಸೀಸನ್​​ಗೆ ವೈಲ್ಡ್ ಕಾರ್ಡ್ ಮೂಲಕ ಬಂದಿದ್ದರು. ಈ ಸೀಸನ್​​ಗೂ ಅವರು ಬಂದರು. ಈ ಬಾರಿ ಒಂದು ತಿಂಗಳು ಇದ್ದರು. ಸಂಭಾವನೆ ವಿಷಯದಲ್ಲಿ ರಜತ್ ಮಾತನಾಡಿದ್ದಾರೆ. ‘11ನೇ ಸೀಸನ್​ ಅಲ್ಲಿ ಕಡಿಮೆ ಕೊಟ್ಟಿದ್ದರು, ಈ ಬಾರಿ ಚೆನ್ನಾಗಿಯೇ ಕೊಟ್ಟಿದ್ದಾರೆ’ ಎಂದು ರಜತ್ ಅವರು ವಿವರಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More