ಮೈಸೂರು ದಸರಾ: ಪೂಜೆ ನಡುವೆ ಮೊಮ್ಮಗನ ಜೊತೆ ಆಟವಾಡಿದ ರಾಜಮಾತೆ ಪ್ರಮೋದಾ ದೇವಿ

Updated on: Oct 20, 2026 | 1:36 PM

ಮೈಸೂರು ದಸರಾ ರಾಜ ದೇವತಾ ಪೂಜಾ ಕೈಂಕರ್ಯದಲ್ಲಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ತಮ್ಮ ಮೊಮ್ಮಗನಾದ ಆದ್ಯವೀರ ಅಥವಾ ಯುಗಾಧ್ಯಕ್ಷ ಅವರೊಂದಿಗೆ ಆಟವಾಡಿದ ಪ್ರೀತಿಪೂರ್ವಕ ಕ್ಷಣಗಳು ಎಲ್ಲರ ಗಮನ ಸೆಳೆದಿವೆ. ಯದುವೀರ್ ಅವರ ಪತ್ನಿ ತ್ರಿಷಿಕಾ ಹಾಗೂ ಇತರ ಕುಟುಂಬ ಸದಸ್ಯರು ಪೂಜೆಯಲ್ಲಿ ಪಾಲ್ಗೊಂಡರು. ಇದು ಸಂಪ್ರದಾಯ ಮತ್ತು ಕುಟುಂಬದ ಬಾಂಧವ್ಯದ ಸುಂದರ ಸಂಗಮವಾಗಿತ್ತು.

ಮೈಸೂರಿನಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವ ದಸರಾ ಸಂಭ್ರಮದಲ್ಲಿ, ರಾಜಮನೆತನದ ಸಂಪ್ರದಾಯಗಳ ಜೊತೆಗೆ ಕುಟುಂಬದ ವಾತ್ಸಲ್ಯದ ಕ್ಷಣಗಳು ಮನ ಸೆಳೆದಿವೆ. ದಸರಾ ಮಹೋತ್ಸವದ ಅಂಗವಾಗಿ ನಡೆದ ರಾಜ ದೇವತಾ ಪೂಜಾ ಕೈಂಕರ್ಯದ ಸಂದರ್ಭದಲ್ಲಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ತಮ್ಮ ಮೊಮ್ಮಗನೊಂದಿಗೆ ಆಟವಾಡಿದ ದೃಶ್ಯಗಳು ವಿಶೇಷವಾಗಿ ಗಮನ ಸೆಳೆದವು.

ಈ ಪವಿತ್ರ ಪೂಜೆಯಲ್ಲಿ ಯದುವೀರ್ ಅವರ ಪತ್ನಿ ತ್ರಿಷಿಕಾ ಹಾಗೂ ಅವರ ಪುತ್ರರಾದ ಆದ್ಯವೀರ ಮತ್ತು ಯುಗಾಧ್ಯಕ್ಷ್ ಕೂಡ ಉಪಸ್ಥಿತರಿದ್ದರು. ರಾಜಮಾತೆ ಪ್ರಮೋದಾ ದೇವಿ ಅವರು ಪ್ರಾರ್ಥನಾ ವಿಧಿಗಳನ್ನು ವೀಕ್ಷಿಸುತ್ತಲೇ ಮೊಮ್ಮಗನೊಂದಿಗೆ ನಗುತ್ತಾ, ಪ್ರೀತಿಯಿಂದ ಸಂಭಾಷಣೆ ನಡೆಸಿದರು. ಪೂಜೆಯ ಗಂಭೀರ ವಾತಾವರಣದ ನಡುವೆಯೂ ಅಜ್ಜಿ-ಮೊಮ್ಮಗನ ಈ ಆಪ್ತ ಕ್ಷಣಗಳು ಎಲ್ಲೆಡೆ ವೈರಲ್​ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Loading...
Unable to load recommendations.
Follow Us
ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More