ಗದಗದಲ್ಲಿ ಮತ್ತೊಂದು ಅಚ್ಚರಿಯ ಘಟನೆ: ಆ ಒಂದು ಶಬ್ದಕ್ಕೆ ದುರ್ಗಮ್ಮನ ಮೂರ್ತಿ ಕಾರಣ

Edited By:

Updated on: Jan 17, 2026 | 9:03 PM

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ನಿಗೂಢ ಗೆಜ್ಜೆ ಮತ್ತು ಗಂಟೆ ಸದ್ದು ಕೇಳಿಬರುತ್ತಿದೆ. ದುರ್ಗಾದೇವಿ ಮತ್ತು ಮಾಯಮ್ಮ ದೇವಿಯ ಮೂರ್ತಿಗಳನ್ನು ಬಣ್ಣಕ್ಕೆ ತಂದ ನಂತರ ಮೂರು ದಿನಗಳಿಂದ ಈ ಪವಾಡ ನಡೆಯುತ್ತಿದೆ. ಗ್ರಾಮಸ್ಥರು ಇದನ್ನು ದೈವಿಕ ಶಕ್ತಿಯ ಸಂಕೇತವೆಂದು ನಂಬಿದ್ದು, ಸರಿಯಾದ ವಿಧಿವಿಧಾನಗಳ ಬಗ್ಗೆ ಗೊಂದಲಕ್ಕೊಳಗಾಗಿದ್ದಾರೆ.

ಗದಗ, ಜ.17: ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ನಿಗೂಢ ಶಬ್ದವೊಂದು ಕೇಳಿ ಗ್ರಾಮಸ್ಥರ ಅಚ್ಚರಿಗೊಂಡಿದ್ದಾರೆ. ದೇಗುಲದ ಗರ್ಭಗುಡಿಯಲ್ಲಿ ದುರ್ಗಾದೇವಿ ಮತ್ತು ಮಾಯಮ್ಮ ದೇವಿಯ ಗೆಜ್ಜೆ ಸದ್ದು ಹಾಗೂ ಗಂಟೆ ನಾದ ಕೇಳಿಬರುತ್ತಿದ್ದು, ಇದು ಮೂರು ದಿನಗಳಿಂದ ಈ ಶಬ್ದ ಕೇಳಿ ಬರುತ್ತಿದೆ. ಗ್ರಾಮಸ್ಥರಾದ ಗಂಗವ್ವ ಅವರ ಪ್ರಕಾರ, ದುರ್ಗಮ್ಮನ ಮೂರ್ತಿಯನ್ನು ಬಣ್ಣಕ್ಕೆ ತಂದ ನಂತರ ಈ ಘಟನೆಗಳು ಪ್ರಾರಂಭವಾಗಿವೆ. ಬುಧವಾರದಂದು ದೇಗುಲಕ್ಕೆ ತಂದ ಮೂರ್ತಿಗಳಿಂದ ಈ ಶಬ್ಧಗಳು ಕೇಳಿಬರುತ್ತಿದ್ದು, ಗ್ರಾಮಸ್ಥರು ಇದನ್ನು ಪವಾಡವೆಂದು ಬಣ್ಣಿಸಿದ್ದಾರೆ. ಹಗಲಿನಲ್ಲಿಯೂ, ಮಧ್ಯಾಹ್ನ 12 ಗಂಟೆಗೆ, ಗೆಜ್ಜೆ ಮತ್ತು ಗಂಟೆ ಸದ್ದು ಕೇಳಿಸಿದ್ದು, ಕೆಲವೊಮ್ಮೆ ನಿರಂತರವಾಗಿ ಈ ಶಬ್ದ ಕೇಳಿ ಬರುತ್ತದೆ. ಇದರಿಂದ ಗ್ರಾಮಸ್ಥರು ರಾತ್ರಿಯಿಡೀ ದೇವಸ್ಥಾನದ ಬಳಿ ಜಾಗರಣೆ ಮಾಡಿದ್ದಾರೆ. ದುರ್ಗಾದೇವಿ ಮೂರ್ತಿಗಳಿಗೆ ಜಾತ್ರೆ ಮಾಡಬೇಕಿತ್ತೇ ಅಥವಾ ಬಣ್ಣ ಲೇಪಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಏನಾದರೂ ವಿಧಿವಿಧಾನ ಲೋಪವಾಗಿದೆಯೇ ಎಂಬ ಗೊಂದಲ ಗ್ರಾಮಸ್ಥರಲ್ಲಿದೆ. ಈ ದೈವಿಕ ಶಕ್ತಿಯು ಸರಿಪಡಿಸಲು ಏನು ಮಾಡಬೇಕು ಎಂದು ಅವರು ಚಿಂತಿಸುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jan 17, 2026 09:01 PM