ಮೈಸೂರಿನ ರೌಡಿಗಳಿಗೆ ಪೊಲೀಸ್ ಕಮೀಶನರ್ ರಮೇಶ್ ಬಾನೋತ್ ಖಡಕ್ ಎಚ್ಚರಿಕೆ, ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ

|

Updated on: Aug 14, 2023 | 11:30 AM

ಎಡಿಜಿಪಿ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್, ರಮೇಶ್ ಬಾನೋತ್ ಅವರಂಥ ದಕ್ಷ ಅಧಿಕಾರಿಗಳಿದ್ದ ಕಡೆ ರೌಡಿಶೀಟರ್, ಪುಡಿ ರೌಡಿಗಳು ಬಾಲ ಮುದುರಿಕೊಂಡು ಬಿಲ ಸೇರಿಬಿಡುತ್ತಾರೆ. ಯಾವನಾದರೂ ಬಾಲ ಬಿಚ್ಚುವ ಪ್ರಯತ್ನ ಮಾಡಿದರೆ ತಕ್ಕ ಶಿಕ್ಷೆ ತಪ್ಪಿದ್ದಲ್ಲ!

ಮೈಸೂರು: ಐಪಿಎಸ್ ಅಧಿಕಾರಿ ರಮೇಶ್ ಬಾನೋತ್ (Ramesh Banot) ನಗರದ ಪೊಲೀಸ್ ಕಮೀಶನರ್ ಆಗಿ ಚಾರ್ಜ್ ವಹಿಸಿಕೊಂಡು ಸುಮಾರು 10 ತಿಂಗಳು ಕಳೆದಿರಬಹುದು. ಈ ಅವಧಿಯಲ್ಲಿ ರಾಜ್ಯದ ಸಾಂಸ್ಕೃತಿಕ ರಾಜಧಾನಿಯಲ್ಲಿ ಅಪರಾಧ ಕೃತ್ಯಗಳ ಪ್ರಮಾಣದಲ್ಲಿ ಇಳಿಕೆಯಾಗಿದೆ ಅಂತ ನಗರದ ನಿವಾಸಿಗಳು ಹೇಳುತ್ತಾರೆ. ಊರಿದ್ದಲ್ಲಿ ರೌಡಿಗಳಿರಲೇಬೇಕು, ರೌಡಿಗಳಿದ್ದಲ್ಲಿ ಸಮಾಜಘಾತುಕ, ಕಾನೂನುಬಾಹಿರ ಚಟುವಟಿಕೆಗಳು ಅವ್ಯಾಹತವಾಗಿ ನಡೆಯುತ್ತವೆ. ಆದರೆ ಎಡಿಜಿಪಿ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ (ADGP Alok Kumar), ರಮೇಶ್ ಬಾನೋತ್ ಅವರಂಥ ದಕ್ಷ ಅಧಿಕಾರಿಗಳಿದ್ದ ಕಡೆ ರೌಡಿಶೀಟರ್, ಪುಡಿ ರೌಡಿಗಳು (small time rowdies) ಬಾಲ ಮುದುರಿಕೊಂಡು ಬಿಲ ಸೇರಿಬಿಡುತ್ತಾರೆ. ಯಾವನಾದರೂ ಬಾಲ ಬಿಚ್ಚುವ ಪ್ರಯತ್ನ ಮಾಡಿದರೆ ಅಂಥವರನ್ನು ಠಾಣೆಗಳಿಗೆ ಕರೆಸಿ ಪರೇಡ್ ಮಾಡಿಸುವುದರ ಜೊತೆ ಇಲ್ಲಿ ರಮೇಶ್ ಬಾನೋತ್ ಮಾಡುತ್ತಿದ್ದಾರಲ್ಲ, ಹಾಗೆ ಎಚ್ಚರಿಸಲಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ