ಕಡಿಮೆ ರಕ್ತದೊತ್ತಡದಂಥ ಸ್ಥಿತಿಗೆ ಮತ್ತೊಂದು ಬಲಿ; ಮಂಗಳೂರಲ್ಲಿ ನರ್ಸಿಂಗ್ ಓದುತ್ತಿದ್ದ ಸುಮಾಗೆ ಕೇವಲ 19ರ ಪ್ರಾಯ
Low BP condition turning out to be deadlier: ಕಳೆದ ಸೋಮವಾರ ಬೆಳಗ್ಗೆ ಸಿನಿಮಾ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ವಿಜಯ್ ಸಹ ಲೋ ಬಿಪಿಯಿಂದ ಬ್ಯಾಂಕಾಕ್ ನ ಹೋಟೆಲೊಂದರಲ್ಲಿ ಸಾವನ್ನಪ್ಪಿದ್ದರು ಮತ್ತು ಅವರಿಗೆ ಕೇವಲ 41-ವರ್ಷ ವಯಸ್ಸಾಗಿತ್ತು
ಮಂಗಳೂರು: ಇದೊಂದು ಆಘಾತಕಾರಿ ಸುದ್ದಿ ಮತ್ತು ಬೆಳವಣಿಗೆ. ನಗರದ ನರ್ಸಿಂಗ್ ಕಾಲೇಜೊಂದರ ವಿದ್ಯಾರ್ಥಿನಿ ಸುಮಾ (Suma) ಹೆಸರಿನ ಕೇವಲ 19 ವರ್ಷದ ವಿದ್ಯಾರ್ಥಿನಿ ಹೃದಯಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ. ಕಡಿಮೆ ರಕ್ತದೊತ್ತಡ (ಲೋ ಬಿಪಿ) (low BP) ಅವರ ಹೃದಯಾಘಾತಕ್ಕೆ ಕಾರಣವೆಂದು ಹೇಳಲಾಗಿದೆ. ಬೆಳ್ತಂಗಡಿ ತಾಲ್ಲೂಕಿನ ನೆರಿಯ ಗ್ರಾಮದವರಾಗಿದ್ದ ಸುಮಾ ಕಳೆದ ಬುಧವಾರ ಅನಾರೋಗ್ಯಕ್ಕೀಡಾದ ಕಾರಣ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳಲು ಸ್ವಗ್ರಾಮಕ್ಕೆ ಬಂದಿದ್ದರು. ಆದರೆ, ರವಿವಾರದಂದು ಅವರ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರು ಉಂಟಾದ ಕಾರಣ ಕುಟುಂಬವರು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ರಕ್ತದೊತ್ತಡ ಅಪಾಯಕಾರಿಯಾಗಿ ಕಡಿಮೆಯಾಗಿ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಳೆದ ಸೋಮವಾರ ಬೆಳಗ್ಗೆ ಸಿನಿಮಾ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ವಿಜಯ್ (Spandana Vijay Raghavendra) ಸಹ ಲೋ ಬಿಪಿಯಿಂದ ಬ್ಯಾಂಕಾಕ್ ನ ಹೋಟೆಲೊಂದರಲ್ಲಿ ಸಾವನ್ನಪ್ಪಿದ್ದರು ಮತ್ತು ಅವರಿಗೆ ಕೇವಲ 41-ವರ್ಷ ವಯಸ್ಸಾಗಿತ್ತು. ಲೋ ಬಿಪಿ ಮಾರಣಾಂತಿಕ ಅಂತ ಈಗಷ್ಟೇ ನಮ್ಮ ಗಮನಕ್ಕೆ ಬರುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ