ಪ್ರಧಾನಿ ಮೋದಿಗೆ 75ನೇ ಹುಟ್ಟು ಹಬ್ಬ ಸಂಭ್ರಮ; ಅಮೃತೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು 75 ನೇ ಹುಟ್ಟುಹಬ್ಬದ ಸಂಭ್ರಮ. ಅವರಿಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಬೇರೆ ಬೇರೆ ಭಾಗಗಳಲ್ಲಿ ಮೋದಿ ಹೆಸರಲ್ಲಿ ಪೂಜೆ ಪುನಸ್ಕಾರಗಳೂ ನಡೆಯುತ್ತಿವೆ. ಅದೇ ರೀತಿ ಮೈಸೂರಿನ ಅಮೃತೇಶ್ವದ ದೇವಾಲಯದಲ್ಲಿಯೂ ಮೋದಿಯವರ ಹೆಸರಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಾಗಿದೆ.
ಮೈಸೂರು, ಸೆಪ್ಟೆಂಬರ್ 17: ಇಂದು ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ 75 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ. ಹುಟ್ಟುಹಬ್ಬದ ಹಿನ್ನೆಲೆ ಮೋದಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಜೊತೆಗೆ ಹಲವೆಡೆ ಮೋದಿ ಹೆಸರಲ್ಲಿ ಪೂಜೆ, ಪುನಸ್ಕಾರ ಪ್ರಾರ್ಥನೆಗಳೂ ನಡೆಯುತ್ತಿವೆ. ಅದೇ ರೀತಿ ಮೈಸೂರಿನ ಅಮೃತೇಶ್ವರದ ದೇವಸ್ಥಾನದಲ್ಲಿ ಸಂಸದ ಯದುವೀರ್ ಒಡೆಯರ್ ಮತ್ತು ಶಾಸಕ ಶ್ರೀವತ್ಸವ ನೇತೃತ್ವದಲ್ಲಿ ಪ್ರಧಾನಿ ಮೋದಿಯವರ ಹೆಸರಲ್ಲಿ ವಿಶೇಷ ಪೂಜೆಯನ್ನು ಇಂದು ನೆರವೇರಿಸಲಾಯಿತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
