ಟ್ರಾಫಿಕ್​ ಪೊಲೀಸ್​ ಕಣ್ತಪ್ಪಿಸಿದೆ ಎಂದು ಬೀಗಬೇಡಿ..ನೀವು ವಾಹನ ನಿಲ್ಲಿಸಿದ ಸ್ಥಳಕ್ಕೇ ಬಂದು ದಂಡ ವಸೂಲಿ ಮಾಡ್ತಾರೆ ನೋಡಿ !
ಸಂಚಾರಿ ನಿಯಮ ಉಲ್ಲಂಘಿಸಿದರೆ ವಾಹನದ ಟೈಯರ್​ಗೆ ಲಾಕ್​ ಮಾಡುತ್ತಾರೆ ಪೊಲೀಸರು..

ಟ್ರಾಫಿಕ್​ ಪೊಲೀಸ್​ ಕಣ್ತಪ್ಪಿಸಿದೆ ಎಂದು ಬೀಗಬೇಡಿ..ನೀವು ವಾಹನ ನಿಲ್ಲಿಸಿದ ಸ್ಥಳಕ್ಕೇ ಬಂದು ದಂಡ ವಸೂಲಿ ಮಾಡ್ತಾರೆ ನೋಡಿ !

|

Updated on: Feb 27, 2021 | 11:53 AM

ಕಳೆದ ವರ್ಷ ಕೊವಿಡ್​-19 ಸಾಂಕ್ರಾಮಿಕ ಭಯವಿತ್ತು. ಈ ಸಂದರ್ಭದಲ್ಲೂ ಕೂಡ ಟ್ರಾಫಿಕ್​ ರೂಲ್ಸ್ ಬ್ರೇಕ್​ ಮಾಡಿದ್ದವರಿಂದ ಒಟ್ಟಾರೆ 9 ಕೋಟಿಯಷ್ಟು ದಂಡವನ್ನು ವಸೂಲಿ ಮಾಡಿದ್ದಾರೆ.

ಸಂಚಾರಿ ನಿಯಮಗಳನ್ನು ಪಾಲಿಸಿ ಎಂದು ಟ್ರಾಫಿಕ್​ ಪೊಲೀಸರು ಹೇಳುತ್ತಲೇ ಇರುತ್ತಾರೆ. ಆದರೂ ಒಂದಷ್ಟು ಜನರು ಅದನ್ನು ಕಿವಿ ಮೇಲೆ ಹಾಕಿಕೊಳ್ಳದೆ ನಿಯಮ ಉಲ್ಲಂಘನೆ ಮಾಡುತ್ತಲೇ ಇರುತ್ತಾರೆ. ಅದರಲ್ಲಿ ಕೆಲವರು ಸಿಕ್ಕಿಬಿದ್ದು, ಸ್ಥಳದಲ್ಲೇ ದಂಡ ಕಟ್ಟಿ ಹೋಗುತ್ತಾರೆ. ಇನ್ನು ಒಂದಷ್ಟು ಮಂದಿ ಪೊಲೀಸರು ನಿಲ್ಲಿಸಲು ಕೈ ಮಾಡಿದರೂ ಹಾಗೆ ತಪ್ಪಿಸಿಕೊಂಡು ಹೋಗುತ್ತಾರೆ.

ಆದರೆ ಮೈಸೂರು ಪೊಲೀಸರು ಇದಕ್ಕೊಂದು ಹೊಸ ಐಡಿಯಾ ಮಾಡಿದ್ದಾರೆ. ಇನ್ಮುಂದೆ ತಪ್ಪಿಸಿಕೊಂಡು ಹೋದೆ ಎಂದು ನೀವು ನಿರಾಳ ಆಗುವ ಹಾಗಿಲ್ಲ. ರೂಲ್ಸ್​ ಬ್ರೇಕ್​ ಮಾಡಿ ಹೋಗಿ ವಾಹನವನ್ನು ಎಲ್ಲಿ ನಿಲ್ಲಿಸಿದ್ದೀರೋ, ಅಲ್ಲಿಯೇ ಬಂದು ದಂಡ ವಸೂಲಿ ಮಾಡುತ್ತಾರೆ. ಈ ವರ್ಷ ಒಂದೆ ತಿಂಗಳಲ್ಲಿ 1 ಕೋಟಿಗೂ ಹೆಚ್ಚು ದಂಡ ವಸೂಲಿ ಮಾಡಿದ್ದಾರೆ.ಸಂಬಂಧಪಟ್ಟ ವಾಹನದ ಚಕ್ರಕ್ಕೆ ಲಾಕ್ ಮಾಡಿ, ಸವಾರರು ಬಂದ ತಕ್ಷಣ ದಂಡ ವಸೂಲಿ ಮಾಡುತ್ತಾರೆ.