ಚಿರತೆಯೊಂದಿಗೆ ಧೈರ್ಯದಿಂದ ಹೋರಾಡಿ, ಅದರ ಕಣ್ಣಿಗೆ ತಿವಿದು ಪಾರಾದ ಬಾಲಕ !

Lakshmi Hegde
|

Updated on:Feb 27, 2021 | 11:19 AM

ಗುಂಡಿಗೆ ಗಟ್ಟಿ ಇದ್ರೆ ಎಂಥ ಅಪಾಯದ ಪರಿಸ್ಥಿತಿಯನ್ನೂ ಧೈರ್ಯವಾಗಿ ಎದುರಿಸಬಹುದು ಎಂಬುದಕ್ಕೆ ಮೈಸೂರಿನ ಈ ಬಾಲಕ ಸಾಕ್ಷಿ. ಈತ ಚಿರತೆಯ ಬಾಯಿಂದ ತಪ್ಪಿಸಿಕೊಂಡು ಬಂದಿದ್ದಾನೆ.

ಮೈಸೂರು ತಾಲೂಕಿನ ಕಡಕೊಳ ಗ್ರಾಮದ ರವಿಕುಮಾರ್ ಹಾಗೂ ಲಕ್ಷ್ಮಿ ಎಂಬುವವರ ಪುತ್ರ ನಂದನ್ ಸದ್ಯ 6ನೇ ತರಗತಿಯಲ್ಲಿ ಓದುತ್ತಿರುವ ಬಾಲಕ. ಪ್ರತಿ ದಿನ ಶಾಲೆ ಮುಗಿಸಿಕೊಂಡು ತಂದೆ ಜೊತೆ ಜಮೀನಿಗೆ ಹೋಗುತ್ತಿದ್ದ. ಅದೇ ರೀತಿ‌ ಕಳೆದ ಶನಿವಾರ ಕೂಡ ಹೋಗಿದ್ದಾನೆ.

ಈ ವೇಳೆ ಮನೆಯಲ್ಲಿರುವ ಹಸುಗಳಿಗೆ ಹುಲ್ಲನ್ನು ತೆಗೆದುಕೊಳ್ಳಲು ಪ್ರಾರಂಭ ಮಾಡಿದ್ದು, ಆಗ ಏಕಾಏಕಿ ಬಾಲಕನ ಮೇಲೆ ಹಿಂದಿನಿಂದ ಚಿರತೆ ದಾಳಿ ಮಾಡಿದೆ. ಆತನ ಕುತ್ತಿಗೆಗೆ ಬಾಯಿ ಹಾಕಿದ್ದರೂ ಹೆದರದೆ, ಅದರ ಕಣ್ಣಿಗೆ ತಿವಿದು, ತಪ್ಪಿಸಿಕೊಂಡಿದ್ದಾನೆ. ಈತನಿಗೆ ಸಾಥ್ ನೀಡಿದ ತಂದೆ ಪ್ರಾಣದ ಹಂಗು ತೊರೆದು ಮಗನನ್ನು ಉಳಿಸಿದ್ದಾರೆ.

ಇದನ್ನೂ ಓದಿ:ನರಹಂತಕ ಚಿರತೆಗಾಗಿ ಮೆಗಾ ತಲಾಶ್, ಟ್ರ್ಯಾಪ್ ಕ್ಯಾಮರಾದಲ್ಲಿ 4 ವನ್ಯಮೃಗಗಳು ಪತ್ತೆ

Published on: Feb 27, 2021 11:07 AM