Loading video

Bengaluru; ಇಂಡಿಯ ಅಂತ ಹೆಸರಿಟ್ಟುಕೊಂಡ ಮಾತ್ರಕ್ಕೆ ಇಂಡಿಯಾದ ಸಮಸ್ಯೆಗಳು ಕೊನೆಗೊಳ್ಳಲಾರವು: ಹೆಚ್ ಡಿ ಕುಮಾರಸ್ವಾಮಿ

Updated on: Jul 19, 2023 | 3:02 PM

ಸಭೆಯನ್ನು ಬೆಂಗಳೂರಲ್ಲಿ ಆಯೋಜಿಸಿ ರಾಜ್ಯ ಬೊಕ್ಕಸದ ಮೇಲೆ ಎಷ್ಟು ಹೊರೆ ಹಾಕಲಾಗಿದೆ ಅಂತ ಸರ್ಕಾರ ತಿಳಿಸಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.

ಬೆಂಗಳೂರು: ನಿನ್ನೆ ಬೆಂಗಳೂರಲ್ಲಿ ಸಭೆ ನಡೆಸಿದ ರಾಷ್ಟ್ರೀಯ ವಿರೋಧ ಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ ಇಂಡಿಯ (I N D I A) ಅಂತ ಹೆಸರಿಟ್ಟುಕೊಂಡಿರುವುದನ್ನು ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಗೇಲಿ ಮಾಡಿದ್ದಾರೆ. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಮುಖ್ಯಮಂತ್ರಿ, ಇಂಡಿಯ ಅಂತ ಹೆಸರಿಟ್ಟುಕೊಂಡ ಮಾತ್ರಕ್ಕೆ ಇಂಡಿಯಾದ (India) ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂದು ಹೇಳಿದರು. ಎಲ್ಲ ಸೇರಿ ಏನೋ ಕಸರತ್ತು ನಡೆಸುತ್ತಿದ್ದಾರೆ ಅದು ಎಲ್ಲಿವರೆಗೆ ತಲಪುತ್ತದೆ ಕಾದು ನೋಡಬೇಕಿದೆ, ಅದರೆ ಈ ಸಭೆಯನ್ನು ಬೆಂಗಳೂರಲ್ಲಿ ಆಯೋಜಿಸಿ ರಾಜ್ಯ ಬೊಕ್ಕಸದ ಮೇಲೆ ಎಷ್ಟು ಹೊರೆ ಹಾಕಲಾಗಿದೆ ಅಂತ ಸರ್ಕಾರ ತಿಳಿಸಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು. ಯಾವುದೇ ರಾಜಕೀಯ ಸಂಘಟನೆ ಇಂಡಿಯ ಅಂತ ಹೆಸರಿಟ್ಟುಕೊಳ್ಳಲು ಸಂವಿಧಾನದಲ್ಲಿ ಅವಕಾಶವಿಲ್ಲವಲ್ಲ ಸರ್ ಎಂದು ಪತ್ರಕರ್ತರೊಬ್ಬರು ಹೇಳಿದಾಗ, ಪ್ರಾಯಶಃ ಅದರ ಬಗ್ಗೆ ಹೆಚ್ಚು ಮಾಹಿತಿಯಿರದ ಕುಮಾರಸ್ವಾಮಿ, ನೋಡೋಣ ಯಾರಾದರೂ ಕೇಸ್ ದಾಖಲಿಸಬಹುದು, ಆಗ ನ್ಯಾಯಾಲಯ ತೀರ್ಪು ಪ್ರಕಟಿಸುತ್ತದೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ