ಡ್ರೋನ್​ ಪ್ರತಾಪ್​ ಚಾಲಾಕಿತನಕ್ಕೆ ಇನ್ನೊಂದು ಸಾಕ್ಷಿ; ಬಿಕ್ಕಿ ಬಿಕ್ಕಿ ಅತ್ತ ನಮ್ರತಾ ಗೌಡ

Updated on: Nov 28, 2023 | 5:55 PM

ಡ್ರೋನ್​ ಪ್ರತಾಪ್​ ಅವರ ಚಾಲಾಕಿತನ ಬೇರೆಯೇ ಇದೆ. ಎಲ್ಲರೂ ಅಂದುಕೊಂಡಂತೆ ಅವರು ಇಲ್ಲ. ದಿನ ಕಳೆದಂತೆಲ್ಲ ಪ್ರತಾಪ್ ಅವರ ನಿಜವಾದ ವ್ಯಕ್ತಿತ್ವ ಏನು ಎಂಬುದು ಗೊತ್ತಾಗುತ್ತಿದೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ರಿಯಾಲಿಟಿ ಶೋನಲ್ಲಿ ಅವರ ಆಟದ ವೈಖರಿಗೆ ಜನರು ಭೇಷ್​ ಎಂದಿದ್ದಾರೆ. ಆದರೆ ನಮ್ರತಾ ಗೌಡ ಕಣ್ಣೀರು ಹಾಕಿದ್ದಾರೆ.

ಡ್ರೋನ್​ ಪ್ರತಾಪ್​ ಅವರು ಬಿಗ್​ ಬಾಸ್​ (Bigg Boss Kannada) ಮನೆಯಲ್ಲಿ ತೆಗೆದುಕೊಳ್ಳುವ ಪ್ರತಿ ನಿರ್ಧಾರಗಳು ಕೂಡ ಚರ್ಚೆ ಹುಟ್ಟು ಹಾಕುತ್ತಿವೆ. ಆರಂಭದಲ್ಲಿ ಅವರು ಸೈಲೆಂಟ್​ ಆಗಿದ್ದರು. ಆದರೆ ನಂತರದ ದಿನಗಳಲ್ಲಿ ತಮ್ಮ ಬುದ್ಧಿವಂತಿಕೆ ಏನು ಎಂಬುದನ್ನು ತೋರಿಸಲು ಶುರು ಮಾಡಿದರು. ಈಗಂತೂ ಬಿಗ್​ ಬಾಸ್​ ಆಟದಲ್ಲಿ ಡ್ರೋನ್​ ಪ್ರತಾಪ್​ (Drone Prathap) ಪಳಗಿದ್ದಾರೆ. ಅವರ ಕೆಲವು ವರ್ತನೆಯಿಂದ ಎಲ್ಲರಿಗೂ ಅಚ್ಚರಿ ಆಗಿದೆ. ಕ್ಯಾಪ್ಟೆನ್ಸಿ ಟಾಸ್ಕ್​ಗೆ ನಮ್ರತಾ ಆಟ ಆಡಬಾರದು ಎಂದು ಡ್ರೋನ್​ ಪ್ರತಾಪ್​ ಹೇಳಿದ್ದಾರೆ. ಆದರೆ ಅದಕ್ಕೂ ಮುನ್ನ ನಮ್ರತಾ ಬಗ್ಗೆ ಅವರು ಹೊಗಳಿಕೆಯ ಮಾತುಗಳನ್ನು ಆಡಿದ್ದರು. ಅವರ ಈ ಸ್ಟ್ರಾಟಜಿಯಿಂದ ನಮ್ರತಾ ಗೌಡ (Namratha Gowda) ಸಖತ್​ ಬೇಸರಗೊಂಡಿದ್ದಾರೆ. ಡ್ರೋನ್​ ಪ್ರತಾಪ್​ ತಮಗೆ ಈ ರೀತಿ ಮೋಸ ಮಾಡಬಾರದಿತ್ತು ಎಂದು ಅವರು ಕಣ್ಣೀರು ಹಾಕಿದ್ದಾರೆ. ‘ಕಲರ್ಸ್​ ಕನ್ನಡ’ ವಾಹಿನಿಯಲ್ಲಿ ನ.28ರ ರಾತ್ರಿ 9.30ಕ್ಕೆ ಈ ಸಂಚಿಕೆ ಪ್ರಸಾರ ಆಗಲಿದೆ. ದಿನದ 24 ಗಂಟೆಯೂ ‘ಜಿಯೋ ಸಿನಿಮಾ’ದಲ್ಲಿ ಲೈವ್​ ನೋಡುವ ಅವಕಾಶ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More