ನಾರಾಯಣ ಹಾಗೂ ಯಮುನಾ ಕೊಲೆ ಕೇಸ್: SITಗೆ ದೂರು ನೀಡಿದ ಮಾವುತನ ಮಕ್ಕಳು

Updated on: Sep 11, 2025 | 3:14 PM

ಧರ್ಮಸ್ಥಳದಲ್ಲಿ ಬುರುಡೆ ಕೇಸ್​ಗೆ ಸಂಬಂಧಿಸಿದಂತೆ ಎಸ್​ಐಟಿ ಅಧಿಕಾರಿಗಳು ನಿನ್ನೆ ಮತ್ತೆ ಹಲವರನ್ನ ವಿಚಾರಣೆ ನಡೆಸ್ತು.. ಗಿರೀಶ್ ಮಟ್ಟಣ್ಣನವರ್, ವಿಠ್ಠಲಗೌಡ, ಪ್ರದೀಪ್ ಗೌಡ, ಜಯಂತ್ ಹಾಗೂ ಯೂಟ್ಯೂಬರ್ ಗಳಾದ ಅಭೀಷೇಕ್ ಮತ್ತು ಕೇರಳ ಮೂಲದ ಮನಾಫ್​ನನ್ನ ವಿಚಾರಣೆ ನಡೆಸಿದರು. ಈ ಮಧ್ಯೆ ಆನೆ ಮಾವುತ ನಾರಾಯಣರ ಮಕ್ಕಳು ಮತ್ತೆ ದೂರು ನೀಡಿದ್ದಾರೆ.

ಮಂಗಳೂರು, ಸೆಪ್ಟೆಂಬರ್​ 11: ಧರ್ಮಸ್ಥಳ ಆನೆ ಮಾವುತ ನಾರಾಯಣ ಹಾಗೂ ತಂಗಿ ಯಮುನಾ ಕೊಲೆ ಕೇಸ್ ಸಂಬಂಧ, ನಾರಾಯಣ ಪುತ್ರ ಗಣೇಶ ಹಾಗೂ ಪುತ್ರಿ ಭಾರತಿ SITಗೆ ಮತ್ತೆ ದೂರು ನೀಡಿದ್ದಾರೆ.. ಹೈಕೋರ್ಟ್‌ನಲ್ಲಿ‌ ಕೇಸ್ ಇದ್ದ ಹಿನ್ನೆಲೆಯಲ್ಲಿ ದೂರು ತೆಗೆದುಕೊಳ್ಳಲು ಆಗವುದಿಲ್ಲ ಅಂತ ಎಸ್​ಐಟಿ ಹೇಳಿತ್ತು.. ಇದೀಗ, ಹೈಕೋರ್ಟ್‌ನಿಂದ ದೂರು ಹಿಂಪಡೆದು ಮತ್ತೆ SITಗೆ ದೂರು ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Sep 11, 2025 11:31 AM