ಪಾದರಕ್ಷೆ ಧರಿಸುವ ಮುನ್ನ ಎಚ್ಚರ..!: ನೆಲಮಂಗಲದಲ್ಲಿ ಶೂ ರ್ಯಾಕ್ ಒಳಗೆ ಕುಳಿತಿತ್ತು ದೈತ್ಯ ನಾಗರಹಾವು

Updated on: Jun 29, 2026 | 9:01 AM

ಮುಖ್ಯಾಂಶಗಳು

  • ಮನೆಯ ಹೊರಗಿದ್ದ ಶೂ ರ್ಯಾಕ್ ಒಳಗೆ ದೈತ್ಯ ನಾಗರಹಾವು
  • ಶೂಗಳ ಮಧ್ಯೆ ಸುರುಳಿ ಸುತ್ತಿಕೊಂಡು ಕುಳಿತಿದ್ದ ದೈತ್ಯ ನಾಗರಹಾವು
  • ಪ್ರಸಿದ್ಧ ಉರಗ ರಕ್ಷಕ ಸ್ನೇಕ್ ಅರುಣ್ ಅವರಿಗೆ ಹಾವಿನ ರಕ್ಷಣೆ

ಮಳೆಗಾಲ ಆರಂಭವಾಗುತ್ತಿದ್ದಂತೆ ವಿಷಪೂರಿತ ಉರಗಗಳು ಮನೆಗಳ ಒಳಗೆ ನುಗ್ಗುವುದು ಸಾಮಾನ್ಯವಾಗಿದೆ. ಬೆಂಗಳೂರಿನ ನೆಲಮಂಗಲದಲ್ಲಿ ಇಂತಹದ್ದೇ ಒಂದು ಮೈ ಜುಂ ಎನಿಸುವ ಘಟನೆ ನಡೆದಿದೆ. ಮನೆಯ ಹೊರಗಿನ ಶೂ ರ್ಯಾಕ್‌ನಲ್ಲಿ ದೈತ್ಯ ನಾಗರಹಾವೊಂದು ಪ್ರತ್ಯಕ್ಷವಾಗಿತ್ತು. ಶೂ ತೆಗೆದುಕೊಳ್ಳಲು ಹೋದ ಯುವಕನಿಗೆ ಹಾವು ಕಂಡುಬಂದು ಆತಂಕಗೊಂಡಿದ್ದ. ಕೂಡಲೇ ಉರಗ ರಕ್ಷಕ ಸ್ನೇಕ್ ಅರುಣ್‌ಗೆ ಮಾಹಿತಿ ನೀಡಲಾಗಿದ್ದು, ಅವರು ಸುರಕ್ಷಿತವಾಗಿ ಹಾವನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಬೆಂಗಳೂರು, ಜೂ.29: ಮಳೆಗಾಲದ ಜಿಟಿಜಿಟಿ ವಾತಾವರಣ ಶುರುವಾಗುತ್ತಿದ್ದಂತೆಯೇ ವಿಷಪೂರಿತ ಉರಗಗಳು ಬೆಚ್ಚಗಿನ ಜಾಗ ಹುಡುಕಿಕೊಂಡು ಮನೆಗಳ ಒಳಗೆ ನುಗ್ಗುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದೀಗ ನೆಲಮಂಗಲ ನಗರದ ರಾಶಿ ಗೇಟ್ ವೇ ಬಡಾವಣೆಯಲ್ಲಿ ಇಂತಹದ್ದೇ ಒಂದು ಮೈ ಜುಂ ಎನಿಸುವ ಘಟನೆ ನಡೆದಿದ್ದು, ಮನೆಯ ಹೊರಗಿದ್ದ ಶೂ ರ್ಯಾಕ್ ಒಳಗೆ ದೈತ್ಯ ನಾಗರಹಾವೊಂದು ಪ್ರತ್ಯಕ್ಷವಾಗಿದೆ. ಮನೆಯೊಂದರಲ್ಲಿ ಯುವಕನೊಬ್ಬ ಹೊರಗೆ ಹೋಗಲೆಂದು ಶೂ ರ್ಯಾಕ್‌ನಿಂದ ಶೂ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಆತನ ಅರಿವಿಗೂ ಬಾರದಂತೆ ಶೂಗಳ ಮಧ್ಯೆ ಸುರುಳಿ ಸುತ್ತಿಕೊಂಡು ಕುಳಿತಿದ್ದ ದೈತ್ಯ ನಾಗರಹಾವು ಪ್ರತ್ಯಕ್ಷವಾಗಿದೆ. ಯುವಕ ತೀವ್ರ ಆತಂಕಕ್ಕೆ ಒಳಗಾಗಿ, ಕಿರುಚಾಡುತ್ತಾ ಹಿಂದಕ್ಕೆ ಓಡಿದ್ದಾನೆ. ಕೂಡಲೇ ಕುಟುಂಬಸ್ಥರು ನೆಲಮಂಗಲದ ಪ್ರಸಿದ್ಧ ಉರಗ ರಕ್ಷಕ ಸ್ನೇಕ್ ಅರುಣ್ ಅವರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಉರಗ ರಕ್ಷಕ ಅರುಣ್ ಅವರು, ಶೂ ರ್ಯಾಕ್‌ನಲ್ಲಿ ಅತ್ಯಂತ ಜಾಗರೂಕತೆಯಿಂದ ಅಡಗಿ ಕುಳಿತಿದ್ದ ನಾಗರಹಾವನ್ನು ಸುರಕ್ಷಿತವಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಅದನ್ನು ಯಾರಿಗೂ ತೊಂದರೆಯಾಗದಂತೆ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More