ಜಗಳೂರಿನ ಪ್ರತಿಷ್ಠಿತ ಹೊಸ ಬಡಾವಣೆಗಳ ದುಸ್ಥಿತಿ ಕೊಳಚೆ ಪ್ರದೇಶಗಳನ್ನು ಹೋಲುತ್ತದೆ!

|

Updated on: Aug 14, 2024 | 11:37 AM

ಇದು ಕೇವಲ ಜಗಳೂರಿನ ಸಮಸ್ಯೆ ಮಾತ್ರ ಅಲ್ಲ, ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸೃಷ್ಟಿಯಾಗಿರುವ ಅಥವಾ ಆಗುತ್ತಿರುವ ಲೇಔಟ್ ಗಳಿಗೆ ಮಳೆಗಾಲದಲ್ಲಿ ಭೇಟಿ ನೀಡಿದರೆ ಇಂಥ ದೃಶ್ಯಗಳು ಕಾಣಿಸುತ್ತವೆ. ಬೆಂಗಳೂರಿನಂಥ ಮೆಟ್ರೋ ನಗರದಲ್ಲೂ ಹೊಸ ಬಡಾವಣೆಗಳ ನಿವಾಸಿಗಳು ಮಳೆಗಾಲದಲ್ಲಿ ಪಡುವ ಬವಣೆ ಅಷ್ಟಿಷ್ಟಲ್ಲ.

ದಾವಣಗೆರೆ: ದೃಶ್ಯಗಳಲ್ಲಿ ನೀವು ನೋಡುತ್ತಿರೋದು ಜಿಲ್ಲೆಯ ಜಗಳೂರು ತಾಲ್ಲೂಕಿನಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಕೆಲ ಬಡಾವಣೆಗಳ ದುಸ್ಥಿತಿ. ಪಟ್ಟಣದ ರಂಗನಾಥ ಬಡಾವಣೆ, ದೇವೇಗೌಡ ಬಡಾವಣೆ ಮತ್ತು ಕೃಷ್ಣಾ ಬಡಾವಣೆಗಳಲ್ಲಿರುವ ಮನೆಗಳಿಗೆ ಕಳೆದ ರಾತ್ರಿ ಸುರಿದ ಮಳೆ ನೀರು ನುಗ್ಗಿದೆ. ಇವು ಹೊಸ ಬಡಾವಣೆಗಳಾಗಿರುವುದರಿಂದ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಆಗಿಲ್ಲ. ಒಳಚರಂಡಿ ಮತ್ತು ರಸ್ತೆಗಳನ್ನು ಮಾಡದೆ ಲೇಔಟ್ ಗಳ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಸೈಟುಗಳು ಅಲಾಟ್ ಆದ ತಕ್ಷಣ ಜನ ಮನೆಗಳನ್ನು ಕಟ್ಟಿಕೊಂಡು ವಾಸಮಾಡಲಾರಂಭಿಸುತ್ತಾರೆ. ಮಳೆಗಾಲ ಶುರವಾದಾಗಲೇ ತಮ್ಮಿಂದ ತಪ್ಪಾಗಿದ್ದು ಅವರ ಅರಿವಿಗೆ ಬರುತ್ತದೆ. ನಮ್ಮ ದಾವಣಗೆರೆ ವರದಿಗಾರ ನೀಡುವ ಮಾಹಿತಿ ಪ್ರಕಾರ ಇವೆಲ್ಲ ಪ್ರತಿಷ್ಠಿತ ಬಡಾವಣೆಗಳು. ಅಂದರೆ ಶ್ರೀಮಂತರು, ಸಮಾಜದಲ್ಲಿ ದೊಡ್ಡವರೆನಿಸಿಕೊಂಡವರು, ಅಧಿಕಾರಿಗಳು ವಾಸಮಾಡುತ್ತಿರುವ ಪ್ರದೇಶಗಳು. ಆದರೆ ಅರ್ಧಂಬರ್ಧ ಡೆವಲಪ್ ಮಾಡಿರುವ ಲೇಔಟ್ ಗಳಲ್ಲಿ ಮನೆಗಳ ನಿರ್ಮಾಣ ಆಗಿದೆ. ಆಗಿರುವ ಪ್ರಮಾದಕ್ಕೆ ಪ್ರತಿಷ್ಠಿತ ನಿವಾಸಿಗಳು ತಮ್ಮನ್ನಷ್ಟೇ ದೂರಿಕೊಳ್ಳಬೇಕು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ರಾತ್ರಿ ಧೋ ಅಂತ ಸುರಿದ ಮಳೆಗೆ ಆನೇಕಲ್​ನ ಕಮ್ಮಸಂದ್ರ ಏರಿಯಾ ಜಲಾವೃತ, ನಿವಾಸಿಗಳಿಗೆ ಗೃಹಬಂಧನ!