ದೇಗುಲ ಪ್ರವೇಶ ನಿರಾಕರಣೆ ವಿಚಾರ: ನಿಖಿಲ್ ಬರಬಾರದು, ಕೈಮುಗಿಬಾರದು ಸ್ಫೋಟಕ ಹೇಳಿಕೆ ನೀಡಿದ ನಿಖಿಲ್ ಕುಮಾರಸ್ವಾಮಿ

Edited By:

Updated on: Nov 14, 2026 | 5:45 PM

ದೊಡ್ಡ ಕುರುಬರಹಳ್ಳಿ ದೇವಸ್ಥಾನ ಪ್ರವೇಶಕ್ಕೆ ತಮ್ಮನ್ನು ತಡೆಯಲಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲವರು ದೇವಸ್ಥಾನದ ಬಾಗಿಲು ಹಾಕಿ ಕೀ ಇಟ್ಟುಕೊಂಡು ತಡೆದಿದ್ದಾರೆ ಎಂದ ಅವರು, ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟಾಗಿದೆ ಎಂದರು. ಸ್ಥಳೀಯ ಶಾಸಕರು ಮತ್ತು ಪೊಲೀಸರ ಮೌನದ ಬಗ್ಗೆಯೂ ನಿಖಿಲ್ ಪ್ರಶ್ನಿಸಿದ್ದಾರೆ.

ರಾಮನಗರ, ನ.14: ಬೆಂಗಳೂರು ದಕ್ಷಿಣ ಜಿಲ್ಲೆಯ ದೊಡ್ಡ ಕುರುಬರಹಳ್ಳಿ ಗ್ರಾಮದಲ್ಲಿ ದೇವಸ್ಥಾನ ಪ್ರವೇಶ ವಿಚಾರವಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ನಿರ್ಬಂಧ ಹೇರಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಘಟನೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ನಡುವೆ ಜಟಾಪಟಿಗೆ ಕಾರಣವಾಗಿದೆ. ದೇವಸ್ಥಾನದ ಉದ್ಘಾಟನೆಗೆ ಹಳ್ಳಿಯ ಜನ ಪ್ರೀತಿಯಿಂದ ಆಹ್ವಾನ ನೀಡಿದ್ದರು ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ. ಘಟನೆ ಕುರಿತು ವಿವರಿಸಿದ ನಿಖಿಲ್, ನೆನ್ನೆ ಕಾಂಗ್ರೆಸ್‌ನ ಕೆಲವೊಂದಷ್ಟು ನಾಯಕರು ದೇವಸ್ಥಾನದ ಅಂಗಳದಲ್ಲಿ ನಿಂತುಕೊಂಡು ಬಾಗಿಲು ಹಾಕಿ ಕೀ ಇಟ್ಟುಕೊಂಡು, ‘ನಿಖಿಲ್ ಬರಬಾರದು, ಕೈಮುಗಿಬಾರದು’ ಎಂದು ದೊಡ್ಡ ರಾಧಾಂತ ಸೃಷ್ಟಿಸಿದ್ದಾರೆ ಎಂದಿದ್ದಾರೆ. ಇದರಿಂದ ಹೆಣ್ಣು ಮಕ್ಕಳಿಗೆ ಬೇಸರವಾಗಿದ್ದು, ಧಾರ್ಮಿಕ ಭಾವನೆಗಳಿಗೆ ಸ್ಪಷ್ಟವಾಗಿ ದಕ್ಕೆ ಉಂಟಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಶಾಸಕರು ಈ ಘಟನೆಯನ್ನು ಖಂಡಿಸುವುದಾಗಿ ಹೇಳಿದರೂ, ಘಟನೆ ನಡೆಯುತ್ತಿದ್ದಾಗ ಮೌನವಾಗಿದ್ದೇಕೆ ಮತ್ತು ಪೊಲೀಸರು ಸ್ಥಳಕ್ಕೆ ಬರಲು ಒಂದು ಗಂಟೆ ತಡವಾಗಿದ್ದು ಯಾಕೆ ಎಂದು ನಿಖಿಲ್ ಪ್ರಶ್ನಿಸಿದ್ದಾರೆ. ದೇವಸ್ಥಾನ ಯಾರದ್ದೂ ಸ್ವತ್ತಲ್ಲ, ಭಕ್ತಾದಿಗಳು ಹಣ ಸಂಗ್ರಹಿಸಿ ನಿರ್ಮಿಸಿರುತ್ತಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಡಿಯೋ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುನಿಲ್​ ಎಮ್​ ಹೆಚ್​