ದೆಹಲಿ: ಸೋನಿಯಾ ಗಾಂಧಿ ನಿವಾಸದಲ್ಲಿ ಉಪಾಹಾರ ಕೂಟ ಸವಿದ ಸೋನಿಪತ್ ರೈತ ಮಹಿಳೆಯರು ಕೇಳಿದ ಪ್ರಶ್ನೆ ಏನು ಗೊತ್ತಾ?

|

Updated on: Aug 01, 2023 | 11:13 AM

ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ಸೋನಿಪತ್ ರೈತ ಮಹಿಳೆಯರು ಭಾಗವಹಿಸಿದ್ದಾರೆ. ಈ ಬಗ್ಗೆ ರಾಹುಲ್​​ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

ದೆಹಲಿ: ಕೈ ಅಧಿನಾಯಕಿ ಸೋನಿಯಾ ಗಾಂಧಿ ಮನೆ ಅಂದ್ರೆ, ಕಾಂಗ್ರೆಸ್​ನ ಪವರ್ ಹೌಸ್.. ಸದಾ ರಾಜಕೀಯ, ಚುನಾವಣೆ ಸೋಲು ಗೆಲುವಿನ ತಂತ್ರಗಾರಿಕೆ ನಡೆಯೋ ಆ ಮನೆಯಲ್ಲಿ ಆವತ್ತು ಒಂದು ವಿಶೇಷತೆ ನಡೆದಿತ್ತು. ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ಸೋನಿಪತ್ ರೈತ ಮಹಿಳೆಯರು ಭಾಗವಹಿಸಿದ್ದಾರೆ. ಈ ಬಗ್ಗೆ ರಾಹುಲ್​​ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ರೈತ ಮಹಿಳೆಯರು ಸೋನಿಯಾ ಗಾಂಧಿಯವರಿಗೆ ರಾಹುಲ್​​ ಗಾಂಧಿ (Rahul Gandhi) ಅವರು ಯಾವಾಗ ಮದುವೆಯಾಗುತ್ತಾರೆ ಎಂದು ಹಾಸ್ಯವಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಜೋರಾಗಿ ನಗುತ್ತಲೇ ಉತ್ತರಿಸಿದ ಸೋನಿಯಾ ಗಾಂಧಿ, ನೀವೇ ಅವನಿಗೆ ಹುಡುಗಿಯನ್ನು ಹುಡುಕಿ ಎಂದು ಹೇಳಿದ್ದಾರೆ. ಇನ್ನು ಪಕ್ಕದಲ್ಲೇ ನಿಂತಿದ್ದ ರಾಹುಲ್​ ಗಾಂಧಿ ಅವರು “ಮುಂದೆ ನೋಡುವ” ಎಂದು ನಗುತ್ತಲೇ ಉತ್ತರಿಸಿದ್ದಾರೆ.

ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ಆಯೋಜಿಸಿದ್ದ ಉಪಾಹಾರ ಕೂಟದಲ್ಲಿ ಸೋನಿಪತ್ ರೈತ ಮಹಿಳೆಯರು ಭಾಗವಹಿಸಿದ್ದಾರೆ. ಈ ಬಗ್ಗೆ ರಾಹುಲ್​​ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದು, ಇಂದು ನಾನು, ಅಮ್ಮ, ಪ್ರಿಯಾಂಕ ನೆನಪಿಡುವ ದಿನ, ಏಕೆಂದರೆ ದೆಹಲಿಯಲ್ಲಿ ಇಂದು ಬೆಳಿಗ್ಗೆ ಸೋನಿಪತ್‌ನ ರೈತ ಸಹೋದರಿಯರ ದರ್ಶನವಾಗಿದೆ, ಮನೆಯಲ್ಲಿ ಅವರೊಂದಿಗೆ ಭೋಜನ, ಒಂದಿಷ್ಟು ಹಾಸ್ಯ, ಹರಟೆ ಎಲ್ಲವೂ ನಡೆಯಿತು. ಅವರು ನಮ್ಮನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಅಮೂಲ್ಯವಾದ ಉಡುಗೊರೆಗಳನ್ನು ನೀಡಿದ್ದಾರೆ. ದೇಸಿ ತುಪ್ಪ, ಸಿಹಿ ಲಸ್ಸಿ, ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ ಮತ್ತು ಬಹಳಷ್ಟು ಪ್ರೀತಿ ಎಲ್ಲವನ್ನು ನಮ್ಮ ಜತೆಗೆ ಹಂಚಿಕೊಂಡಿದ್ದಾರೆ ಎಂದು ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾರೆ.

Published on: Jul 31, 2023 04:00 PM