‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’; Sathish Ninasam
Sathish Ninasam ಅವರು ಇತ್ತೀಚೆಗೆ ವಿವಾದದ ಮೂಲಕ ಸುದ್ದಿ ಆಗಿದ್ದರು. ಈಗ ಅವರು ಮತ್ತೊಂದು ಹೇಳಿಕೆ ನೀಡಿದ್ದಾರೆ. ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಮಾಡಬೇಕು ಎಂದು ಅವರು ಕೋರಿದ್ದಾರೆ. ಅಂದಾಗ ಮಾತ್ರ ಇಂಡಸ್ಟ್ರಿ ಉಳಿಯುತ್ತೆ ಎಂದು ಅವರು ಹೇಳಿದ್ದಾರೆ. ಇದಕ್ಕೆ ಅನೇಕರು ಬೆಂಬಲ ಸೂಚಿಸಿದ್ದಾರೆ.
ಇಂಡಸ್ಟ್ರಿ ಬಡವಾಗಿದೆ, ಸರಿಯಾಗಿ ಸಿನಿಮಾಗಳು ರಿಲೀಸ್ ಆಗುತ್ತಿಲ್ಲ ಎನ್ನುವ ಬೇಸರ ಎಲ್ಲರಿಗೂ ಇದೆ. ಇತ್ತೀಚೆಗೆ ಈ ಬಗ್ಗೆ ನೀನಾಸಂ ಸತೀಶ್ ಮಾತನಾಡಿದ್ದಾರೆ. ನಿರ್ಮಾಪಕರ ಬಗ್ಗೆ ನೀಡಿದ ಹೇಳಿಕೆಗೆ ಸ್ಪಷ್ಟನೆ ನೀಡುವ ವಿಷಯವಾಗಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರತಿ ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು. ಆಗ ಇಂಡಸ್ಟ್ರಿ ಉಳಿಯುತ್ತದೆ’ ಎಂದರು. ಇದರಿಂದ ಚಿತ್ರರಂಗ ಮೊದಲಿನ ಕಳೆಯನ್ನು ಪಡೆದುಕೊಳ್ಳುತ್ತದೆ ಎಂಬುದು ಅವರ ಅಭಿಪ್ರಾಯ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jun 23, 2026 11:56 AM
Loading...
Unable to load recommendations.
Follow Us
