ಶೂನ್ಯದಿಂದ ಶಿಖರಕ್ಕೇರಿದ ಝೀರೋಧ ಕಂಪನಿ ಸ್ಥಾಪಕ ನಿತಿನ್ ಕಾಮತ್ಗೆ ಟಿವಿ9 ಪ್ರಶಸ್ತಿ
2008ರಲ್ಲಿ ಜಾಗತಿಕ ಆರ್ಥಿಕತೆ ಕುಸಿದರೂ ಬೆಂಗಳೂರಿನ ಯುವಕನ ಹಣ ಸುರಕ್ಷಿತವಾಗಿತ್ತು. ಆಗ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋದು ಕಬ್ಬಿಣದ ಕಡಲೆಯಂತಾಗಿತ್ತು.
ಟಿವಿ9 ಕನ್ನಡ ಪ್ರತಿ ವರ್ಷದಂತೆ ಈ ಬಾರಿಯೂ ನವ ನಕ್ಷತ್ರ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಟಿವಿ9 ಕನ್ನಡ 15ನೇ ವಾರ್ಷಿಕೋತ್ಸವ ಹಿನ್ನೆಲೆ ಈ ಬಾರಿ ಸುಮಾರು 9 ಸಾಧಕರನ್ನ ಗುರುತಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಟ ಶಿವರಾಜ್ ಕುಮಾರ್, ನಟಿ ರಶ್ಮಿಕಾ, ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನಿತಿನ್ ಕಾಮತ್ಗೆ ಸನ್ಮಾನಿಸಲಾಯಿತು. 2008ರಲ್ಲಿ ಜಾಗತಿಕ ಆರ್ಥಿಕತೆ ಕುಸಿದರೂ ಬೆಂಗಳೂರಿನ ಯುವಕನ ಹಣ ಸುರಕ್ಷಿತವಾಗಿತ್ತು. ಆಗ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡೋದು ಕಬ್ಬಿಣದ ಕಡಲೆಯಂತಾಗಿತ್ತು. ಷೇರು ಬ್ರೋಕರೇಜ್ ಶುಲ್ಕ ದುಬಾರಿಯಾಗಿದ್ದವು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಅಂತಾ ಯೋಚಿಸಿದ ಯುವಕ, 2010 ರಲ್ಲಿ ತನ್ನದೇ ಷೇರು ಬ್ರೋಕರೇಜ್ ಕಂಪನಿ ಆರಂಭಿಸಿದ್ದರು. ಅತ್ಯಂತ ಕಡಿಮೆ ಶುಲ್ಕ ಪಡೆಯುವ ಮತ್ತು ಸರಳವಾಗಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಸುವ ಕಂಪನಿ ಬೆಂಗಳೂರಿನಲ್ಲಿ ತಲೆ ಎತ್ತಿತು. ಆ ಕಂಪನಿಯೇ ಝೀರೋಧ. ಈ ಕಂಪನಿಯ ಸ್ಥಾಪಕನೇ ಅಪ್ಪಟ ಕನ್ನಡಿಗ ನಿತಿನ್ ಕಾಮತ್.
ಇದನ್ನೂ ಓದಿ
‘ಒಳ್ಳೆಯ ಕೆಲಸಕ್ಕೆ ಇದು ಸ್ಫೂರ್ತಿ’; ನವನಕ್ಷತ್ರ ಸನ್ಮಾನ ಕುರಿತು ರಘು ದೀಕ್ಷಿತ್ ಮಾತು